ಬೆಂಗಳೂರು : ಕರ್ನಾಟಕದಲ್ಲಿ 1,250 ಬ್ಲಾಕ್ ಫಂಗಸ್ ಪ್ರಕರಣಗಳಿದ್ದು, ಸುಮಾರು 30ರಿಂದ 35 ಮಂದಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದ್ದು, ಡೆತ್ ಆಡಿಟ್ ನಿಖರವಾದ ಮಾಹಿತಿಗೆ ಸೂಚನೆ ನೀಡಿದ್ದೇನೆ” ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಬ್ಲಾಕ್ ಫಂಗಸ್ ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ದರ ನಿಗದಿಯಾಗಿಲ್ಲ. ಬ್ಲಾಕ್ ಫಂಗಸ್‌ಗೆ ರಾಜ್ಯಕ್ಕೆ ಔಷಧ ಕೊಡಿಸಲು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಪ್ರಯತ್ನ ನಡೆಸಿದ್ದಾರೆ” ಎಂದರು.
ಇನ್ನು “8 ಕ್ಕೂ ಅಧಿಕ ಕಂಪನಿಗಳ ಜೊತೆ ಚರ್ಚೆ ನಡೆಸಿ ಸಿದ್ಧತೆ ಮಾಡಿಕೊಂಡಿದ್ದು, ದೇಶಾದ್ಯಂತ 80,000 ವಯಲ್ಸ್ ಮಾರುಕಟ್ಟೆಗೆ ಬಂದಿದೆ. ರಾಜ್ಯಕ್ಕೆ 8 -10 ಸಾವಿರ ವಯಲ್ಸ್ ಪೂರೈಕೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.