ಲಾಕ್ ಡೌನ್ ಪರಿಣಾಮ ಹಸಿವಿನಿಂದ ಬಳಲುತ್ತಿರುವ ಕಾರಿಂಜ ದ ಮಂಗಗಳು ಎಂಬ ಶೀರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಪ್ರಸ್ತುತ ಅಂತಹ ಪರಿಸ್ಥಿತಿ ಇಲ್ಲ. ಈ ಬಗ್ಗೆ ಅನೇಕ ಭಕ್ತಾದಿಗಳಿಂದ ಸಹಾಯ ಕೇಳಿ ದೂರವಾಣಿ ಕರೆ ಬರುತ್ತಿದೆ. ಸಕಾರಾತ್ಮಕವಾಗಿ ಸ್ಪಂದಿಸಿದ ಎಲ್ಲಾ ಭಕ್ತರಿಗೂ ಧನ್ಯವಾದಗಳು. ಅಗತ್ಯವಿದ್ದರೆ ಖಂಡಿತಾ ತಮ್ಮ ಸಹಾಯ ಯಾಚಿಸುತ್ತೇವೆ. ದೇವಾಲಯದ ಕಾರ್ಯಾಲಯವನ್ನು ಸಂಪರ್ಕಿಸದೆ ಯಾರೂ ಇಂತಹ ಸುದ್ದಿಗಳನ್ನು ಹರಡಬಾರದಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಆಡಳಿತ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಶ್ರೀ ಕ್ಷೇತ್ರ ಕಾರಿಂಜ ಕಛೇರಿ ದೂರವಾಣಿ 9741085255 ಯನ್ನು ಸಂಪರ್ಕ ಮಾಡಬಹುದು.