ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ಸಿಯೋನ್ ಆಶ್ರಮದಲ್ಲಿದ್ದ ಸುಮಾರು ಇನ್ನೂರಕ್ಕೂ ಅಧಿಕ ಆಶ್ರಮವಾಸಿಗಳಿಗೆ ಕೊರೊನಾ ಸೋಂಕು ತಗಲಿದ್ದು ಇವರನ್ನೆಲ್ಲ ಕೋವಿಡ್ ಕೇರ್ ಸೆಂಟರಿಗೆ ಸ್ಥಳಾಂತರಿಸಲಾಗಿದೆ ಇಲ್ಲಿಯ ಗೋಶಾಲೆಯಲ್ಲಿ ಇದ್ದ ಸುಮಾರು 80ಕ್ಕೂ ಅಧಿಕ ಗೋವುಗಳು ಪಾಲಕರಿಲ್ಲದೆ ಅನಾಥವಾಗಿದ್ದು ಇವುಗಳ ನಿರ್ವಹಣೆಯ ಬಗ್ಗೆ ಮಾನವೀಯ ನೆಲೆಯಲ್ಲಿ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ (ರಿ )ಕಳೆಂಜ ಹಾಗೂ ವಿಶ್ವ ಹಿಂದೂ ಪರಿಷತ್, ಬಜರಂಗದಳ ನೆರಿಯ ಗ್ರಾಮ ಸಮಿತಿ ಜವಾಬ್ದಾರಿ ವಹಿಸಿಕೊಂಡಿದ್ದು ಇಂದು ಬಜರಂಗದಳ ರಾಜ್ಯ ಸಹ ಸಂಯೋಜಕರಾದ ಮುರಳಿಕೃಷ್ಣ ಹಂಸತ್ತಡ್ಕ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟಿನ ಅಧ್ಯಕ್ಷರಾದ ಡಾ. ಎಂ. ಎಂ. ದಯಾಕರ್ , ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ತಾಲೂಕಿನ ಅಧ್ಯಕ್ಷರು ಹಾಗೂ ಟ್ರಸ್ಟಿನ ಕಾರ್ಯದರ್ಶಿಗಳು ಆದ ಸುಬ್ರಹ್ಮಣ್ಯ ಕುಮಾರ್ ಅಗರ್ತರು, ವಿ.ಹಿಂ.ಪ ಜಿಲ್ಲಾ ಉಪಾಧ್ಯಕ್ಷರಾದ ಭಾಸ್ಕರ್ ಧರ್ಮಸ್ಥಳ, ಹಾಗೂ ಪ್ರಮುಖರಾದ ನವೀನ್ ನೆರಿಯಾ, ಸಂತೋಷ್ ಅತ್ತಾಜೆ, ಮೋಹನ್ ಬೆಳ್ತಂಗಡಿ, ನೆರಿಯ ಗ್ರಾಮ ಸಮಿತಿ ಅಧ್ಯಕ್ಷರಾದ ಸತೀಶ್ ಕುಳೆನಾಡಿ, ದೀಕ್ಷಿತ್ ಬಯಲು, ನೆರಿಯ ಗ್ರಾಮ ಪಂಚಾಯತ್ ಸದಸ್ಯರಾದ ಸಚಿನ್ ನೆರಿಯಾ, ವಿಶ್ವನಾಥ್ ಅಣಿಯೂರು, ನಂದಗೋಕುಲ ಗೋಶಾಲ ನಿರ್ವಹಣಾ ಸಮಿತಿಯ ಸಂಯೋಜಕರಾದ ವಿ. ಹರೀಶ್ ನೆರಿಯ ರವರು ಉಪಸ್ಥಿತರಿದ್ದರು.