ಪುತ್ತೂರು: ಬೆಳಂದೂರು ಗ್ರಾಮದ ಅಬೀರ ರಾಮಣ್ಣ ಪೂಜಾರಿಯವರ ಪತ್ನಿ ಲಲಿತಾ(57.ವ)ರವರು ಕೋವಿಡ್ ನಿಂದ ಜೂ.5 ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಕೆಲ ದಿನಗಳ ಹಿಂದೆ ಪಾಸಿಟಿವ್ ಬಂದಿದ್ದು ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಜೂ.5ರಂದು ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಮೃತರ ಅಂತ್ಯ ಸಂಸ್ಕಾರವನ್ನು ಶಾಸಕರ ವಾರ್ ರೂಮ್ ಸಹಕಾರದಿಂದ ನೆರವೆರಿಸಲಾಯಿತು.
.