ವಿಟ್ಲ : ಲಾಕ್ ಡೌನ್ ನಡುವೆಯೂ ವಾಹನಗಳು ತುಂಬಿ ತುಳುಕುತ್ತಿರುವ ದೃಶ್ಯವೂ ಜೂ.7 ರಂದು ವಿಟ್ಲ ಪೇಟೆಯಲ್ಲಿ ಕಂಡು ಬಂದಿತು.
ಸೋಮವಾರ ವಾರದ ಮೊದಲ ದಿನವಾದ್ದರಿಂದ ಅಗತ್ಯ ವಸ್ತುಗಳ ಖರೀದಿಗೆ ಜನ ಬೆಳಿಗ್ಗೆಯೆ ಪೇಟೆ ಕಡೆ ಮುಖ ಮಾಡಿದ್ದು,ಎಲ್ಲರೂ ತಮ್ಮ ತಮ್ಮ ವಾಹನದಲ್ಲಿ ಪೇಟೆಗೆ ಬಂದ ಕಾರಣ ವಿಟ್ಲ ಪೇಟೆಯೂ ವಾಹನಗಳಿಂದ ತುಂಬಿ ಹೋಗಿದ್ದು,ಕೆಲ ಹೊತ್ತು ಟ್ರಾಫಿಕ್ ಜಾಮ್ ಕೂಡ ಸಂಭವಿಸಿತು.
ಈ ನಡುವೆ ವಿಟ್ಲ – ಬದಿಯಡ್ಕ ರಸ್ತೆಯ ಉಕ್ಕುಡ ಎಂಬಲ್ಲಿ ಮರವೊಂದು ರಸ್ತೆಗೆ ಬಿದ್ದ ಕಾರಣದಿಂದಾಗಿಯೂ ವಿಟ್ಲ ಪೇಟೆಯಲ್ಲಿ ವಾಹನ ಸಂಚಾರದಲ್ಲಿ ಕೆಲ ಹೊತ್ತು ತೊಂದರೆ ಉಂಟಾಯಿತು.