ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬನ್ನೂರು ನಿವಾಸಿ ಜಗದೀಶ ಹೆಗ್ಡೆ (35 ವರ್ಷ) ರವರು ಕೋವಿಡ್ ಸೋಂಕಿಗೆ ಒಳಗಾಗಿ ಸತತ 8 ದಿನಗಳವರೆಗೆ ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ ಜೂ.05 ರಂದು ನಿಧನರಾಗಿರುತ್ತಾರೆ. ಈ ಆಘಾತದಿಂದ ಪತ್ನಿ, 10 ವರ್ಷದ ಮಗಳು ಹಾಗೂ 9 ತಿಂಗಳ ಗಂಡು ಮಗುವನ್ನು ಒಳಗೊಂಡ ಕುಟುಂಬವು ಮಾನಸಿಕವಾಗಿ ಜರ್ಜರಿತವಾಗಿದೆ.
ಬಾಡಿಗೆಯ ಮನೆಯಲ್ಲಿ ವಾಸವಾಗಿರುವ ಈ ಕುಟುಂಬದ ಆರ್ಥಿಕ ಸ್ಥಿತಿಯು ತೀರಾ ಶೋಚನೀಯವಾಗಿದ್ದು ಮುಂದಿನ ಜೀವನ ನಿರ್ವಹಣೆಗೆ ದಾರಿ ತೋಚದಾಗಿದೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಈ ಕುಟುಂಬಕ್ಕೆ ಸಹಾಯ ಹಸ್ತ ಬೇಕಾಗಿದೆ.
ನೇರವಾಗಿ ದಿ. ಜಗದೀಶ ಹೆಗ್ಡೆ ಅವರ ಪತ್ನಿ ಹೊನ್ನಮ್ಮ(ಕಾವ್ಯ) ಅವರ ಖಾತೆಗೆ ಧನ ಸಹಾಯ ಮಾಡಲು ಖಾತೆಯ ವಿವರ ಈ ಕೆಳಗಿನಂತಿದೆ
Bank: State Bank of India. Puttur branch.
Name : Honnamma (Kavya)
A/c no: 38450340328
IFSC code : SBIN0040152
GooglePay/
PhonePe no: 9663038148