ಪುತ್ತೂರು : ಕೊರೊನ ಸಂದರ್ಭದಲ್ಲಿ ಪ್ರಾಣ ಲೆಕ್ಕಿಸದೆ ಕೆಲಸ ನಿರ್ವಹಿಸಿದ ಆಶಾ ಕಾರ್ಯಕರ್ತೆ ಡೆಂಗ್ಯೂ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಮುಂಡೂರು ಗ್ರಾಮ ಪಂಚಾಯತ್ ನಲ್ಲಿ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ರಾತ್ರಿ ಹಗಲು ತನ್ನ ಜೀವವನ್ನು ಲೆಕ್ಕಿಸದೆ ಕೆಲಸ ನಿರ್ವಹಿಸಿ ಜನ ಮೆಚ್ಚುಗೆ ಗಳಿಸಿದ್ದ ಸೆರ್ವೆಯ ಶ್ರೀಮತಿ ರಾಜೀವಿ ಯವರು ಡೆಂಗ್ಯೂ ಜ್ವರ ತೀವ್ರಗೊಂಡು ಆಸ್ಪತ್ರಗೆ ದಾಖಲಾಗಿದ್ದು ಸುದ್ದಿ ತಿಳಿದು ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪ ಮತ್ತು ಪಂಚಾಯತ್ ಸದಸ್ಯರಾದ ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ,ಆಸ್ಪತ್ರೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿದರು.
ಅಗತ್ಯವಿದ್ದರೆ ಬೇಕಾದಷ್ಟು ರಕ್ತದ ವ್ಯವಸ್ಥೆ ಮಾಡುವುದಾಗಿ ಧೈರ್ಯ ತುಂಬಿದರು. ಮತ್ತು ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಸಂದರ್ಭದಲ್ಲಿ ಊರಿನ ಪ್ರಮುಖರಾದ ಅರುಣ್ ಪುತ್ತಿಲ,ಮುಂಡೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಅನಿಲ್ ಕಣ್ಣರ್ನೂಜಿ ಮತ್ತು ಪುರಂದರ ಗೌಡ ಉಪಸ್ಥಿತರಿದ್ದರು.
ಕೊರೊನಾದ ಸಂದರ್ಭದಲ್ಲಿ ಆಶಾಕಾರ್ಯಕರ್ತೆಯರಂತೆ ಕೆಲಸ ನಿರ್ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರ ಸಮಾಜಮುಖಿ ಚಿಂತನೆಗೆ ಗ್ರಾಮದ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.