Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಗಿರಿಜಾ ಕಲ್ಯಾಣೋತ್ಸವ : ಪ್ರಾರ್ಥನೆ..!

    ಪುತ್ತೂರು: ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಗಿರಿಜಾ ಕಲ್ಯಾಣೋತ್ಸವ : ಪ್ರಾರ್ಥನೆ..!

    ಪಿಲಿಗೊಬ್ಬು ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥನೆ..!!

    ಪಿಲಿಗೊಬ್ಬು ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥನೆ..!!

    ಲೋನ್ ಕಟ್ಟದ ಕಾರುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್..!

    ಲೋನ್ ಕಟ್ಟದ ಕಾರುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್..!

    ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

    ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ : ಪುತ್ತೂರು ನಗರಸಭೆಗೆ 6.5 ಕೋಟಿ , ವಿಟ್ಲ ಪ.ಪಂ ಗೆ 3.5 ಕೋಟಿ; ಶಾಸಕ ಅಶೋಕ್ ರೈ..!

    ಚಾರ್ ಧಾಮ್ ಯಾತ್ರೆ ತೆರಳಿದ್ದ ಕುಂಪಲದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು..!

    ಚಾರ್ ಧಾಮ್ ಯಾತ್ರೆ ತೆರಳಿದ್ದ ಕುಂಪಲದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು..!

    ಹೃದಯಾಘಾತದಿಂದ ಯುವಕ ಮೃತ್ಯು..!!

    ಹೃದಯಾಘಾತದಿಂದ ಯುವಕ ಮೃತ್ಯು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬೆಂಗಳೂರು

ಹಿಟ್​ ಅಂಡ್​ ರನ್ ಅಪಘಾತ ಎಂದು ಬಿಂಬಿಸಿ ಮಹಿಳೆಯ ಹತ್ಯೆ : ಚಪ್ಪಲಿ ನೀಡಿತ್ತು ಮಹತ್ವದ ಸುಳಿವು!

September 14, 2024
in ಬೆಂಗಳೂರು, ರಾಜ್ಯ
0
ಹಿಟ್​ ಅಂಡ್​ ರನ್ ಅಪಘಾತ ಎಂದು ಬಿಂಬಿಸಿ ಮಹಿಳೆಯ ಹತ್ಯೆ : ಚಪ್ಪಲಿ ನೀಡಿತ್ತು ಮಹತ್ವದ ಸುಳಿವು!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಬೆಂಗಳೂರು : ಅದೊಂದು ಹಿಟ್​ ಅಂಡ್​ ರನ್​ ಅಪಘಾತ ಎಂದುಕೊಂಡಿದ್ದ ಪ್ರಕರಣ, ಆದರೆ ಅವತ್ತು ಸ್ಥಳಕ್ಕೆ ಬಂದಿದ್ದ ಪೊಲೀಸರಿಗೆ ಮೃತಳ ಚಪ್ಪಲಿ ನೀಡಿದ್ದ ಅದೊಂದು ಸುಳಿವು ಪೊಲೀಸರ ಅನುಮಾನವನ್ನು ಗಟ್ಟಿಯಾಗಿಸಿತ್ತು, ಈ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಅಲ್ಲೊಂದು ಸೆಂಟ್ರಲ್​ ಜೈಲ್​ನಲ್ಲಿ ಒಂದಾಗಿದ್ದ ಸ್ನೇಹಿತರಿಬ್ಬರು ಸೇರಿ ಮಾಡಿದ್ದ ಮಾಸ್ಟರ್ ಮೈಂಡ್ ಮರ್ಡರ್​ ಪ್ರಕರಣ ಬಯಲಾಗಿತ್ತು.

Advertisement
Advertisement

ಸೆಪ್ಟಂಬರ್​ 7 ಎಲ್ಲರೂ ಗಣೇಶನ ಹಬ್ಬಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು, ಗ್ರಾಮಗಳಲ್ಲಿ ಗಣೇಶನನ್ನು ಇಡೋದಕ್ಕೆ ಬೇಕಾದ ಸಿದ್ದತೆಗಳಲ್ಲಿ ಜನರು ತೊಡಗಿದ್ದರು. ಹೀಗಿರುವಾಗಲೇ ಕೋಲಾರ ಜಿಲ್ಲೆ ಮಾಲೂರು ತಾಲೂಕು ಹುಂಗೇನಹಳ್ಳಿ ಗೇಟ್​ ಬಳಿಯಿಂದ ಮಾಲೂರು ಪೊಲೀಸ್​ ಠಾಣೆಗೆ ಪೋನ್​ ಮಾಡಿದ್ದರು. ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮಹಿಳೆಯೊಬ್ಬಳು ಸಾವನ್ನಪ್ಪಿರುವ ಅನುಮಾನವಿದೆ ಎಂದು ಕರೆ ಮಾಡಿದ್ದರೂ, ಕೂಡಲೇ ಸ್ಥಳಕ್ಕೆ ಮಾಲೂರು ಇನ್ಸ್​ಪೆಕ್ಟರ್ ವಸಂತ್​ ಕುಮಾರ್ ಹಾಗೂ ಅವರ ಸಿಬ್ಬಂದಿಗಳು ಹುಂಗೇನಹಳ್ಳಿ ಗೇಟ್​ ಬಂದಿದ್ದರು.

Advertisement

ರಸ್ತೆ ಬದಿಯಲ್ಲಿ ಬಿದ್ದಿದ್ದ ಮಹಿಳೆಯ ಶವವನ್ನು ಪರಿಶೀಲಿಸುತ್ತಿದ್ದರು. ಅಕೆಯ ಬಳಿಯಲ್ಲಿ ಒಂದು ಪೂಜಾ ಸಾಮಗ್ರಿಗಳಿದ್ದ ಬ್ಯಾಗ್​ ಬಿದ್ದಿತ್ತು, ಮಹಿಳೆಯ ಶವ ಮುಖ ಕಾಣದ ರೀತಿಯಲ್ಲಿ ಬೋರಲಾಗಿ ಬಿದ್ದಿತ್ತು, ಆಗ ಶವದ ಗುರುತು ಪತ್ತೆಗಾಗಿ ಪೊಲೀಸರು ಶವವನ್ನು ತಿರುಗಿಸಿ ನೋಡಿದ್ರು ಅಷ್ಟೊತ್ತಿಗೆ ನೋಡಿ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಅಯ್ಯೋ ಇದು ನನ್ನ ಹೆಂಡತಿ ಸಾರ್​ ಎಂದು ಗೋಳಾಡೋದಕ್ಕೆ ಶುರುಮಾಡಿಕೊಂಡಿದ್ದ. ಆಗ ಆತನನ್ನು ಸಮಾಧಾನ ಪಡಿಸಿದ್ದ ಪೊಲೀಸರು ಏನಾಗಿದೆ ಎಂದು ವಿಚಾರಣೆ ಮಾಡಲು ಶುರು ಮಾಡಿದ್ದರು.

Advertisement

ಹುಂಗೇನಹಳ್ಳಿ ಗೇಟ್​ನಲ್ಲಿ ಹಿಟ್​ ಅಂಡ್ ರನ್​ ಅಪಘಾತ ರೀತಿಯಲ್ಲಿ ಕಾಣುತ್ತಿದ್ದ ಮೃತ ಮಹಿಳೆಯ ಶವವನ್ನು ಪರಿಶೀಲಿಸಿದ ಮಾಲೂರು ಪೊಲೀಸರು ಆಕೆ ಯಾರು ಏನು ಅನ್ನೋದನ್ನು ವಿಚಾರಣೆ ನಡೆಸಿದ್ದರು, ಈ ವೇಳೆ ಅಲ್ಲೇ ಇದ್ದ ನಂಬಿಗಾನಹಳ್ಳಿ ಗ್ರಾಮದ ಆನಂದ್ ಕುಮಾರ್​ ಅದು ನನ್ನ ಪತ್ನಿ ಲಕ್ಷ್ಮಮ್ಮ(46) ಎಂದು ಪೊಲೀಸರ ಎದುರು ಹೇಳಿದ್ದ. ಈ ವೇಳೆ ಏನಾಯ್ತು ಎಂದು ಪೊಲೀಸರು ಆನಂದ್ ಕುಮಾರ್​ ರಿಂದ ಮಾಹಿತಿ ಪಡೆದಿದ್ದರು.

ಆನಂದ್​ ಕುಮಾರ್ ಮಾಲೂರು ಪೊಲೀಸರ ಎದುರು ಎಲ್ಲವನ್ನೂ ಹೇಳಿದ್ದ.​ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಲಕ್ಷ್ಮಮ್ಮ ಶುಕ್ರವಾರ ಅಂದರೆ ಸೆಪ್ಟಂಬರ್​-6 ರಂದು ನಂಬಿಗಾನಹಳ್ಳಿ ಗ್ರಾಮದಿಂದ ಮಾಲೂರು ಪಟ್ಟಣಕ್ಕೆ ಹೋಗಿ ಹಬ್ಬದ ಸಾಮಾನು ತೆಗೆದುಕೊಂಡು ಹಾಗೆ ತಮ್ಮ ಕುಟುಂಬಕ್ಕೆ ಸ್ನೇಹಿತರಾಗಿದ್ದ ತಿಮ್ಮೇಗೌಡ ಅವರ ಮನೆಗೆ ಹೋಗಿ ತಿಮ್ಮೇಗೌಡ ಹಾಗೂ ಅವರ ಪತ್ನಿ ಲೀಲಾ ಅವರನ್ನು ಹಬ್ಬಕ್ಕೆ ಬರುವಂತೆ ಕರೆದು ಬರೋದಾಗಿ ಹೇಳಿ ಹೋಗಿದ್ದರು.

ಸಂಜೆ ವೇಳೆ ಮಾಲೂರಿನಿಂದ ಹೊರಟು ಮನೆಗೆ ಬರುತ್ತಿರುವುದಾಗಿ ಪೋನ್​ ಮಾಡಿ ಹೇಳಿದ್ದರು, ಇದಾದ ನಂತರ ಲಕ್ಷ್ಮಮ್ಮ ಮನೆಗೆ ಬಂದಿರಲಿಲ್ಲ, ಮೊಬೈಲ್​ ಕೂಡಾ ನಾಟ್ ರೀಚಬಲ್​ ಆಗಿತ್ತು, ಇದರಿಂದ ಲಕ್ಷ್ಮಮ್ಮ ಪತಿ ಆನಂದ್ ಹಾಗೂ ಅವರ ಮಕ್ಕಳು ಕೂಡಾ ಲಕ್ಷ್ಮಮ್ಮರನ್ನು ಹುಡುಕಾಡಿದರಾದರೂ ಅವರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ, ಈ ವೇಳೆ ತಿಮ್ಮೇಗೌಡರಿಗೆ ಪೋನ್​ ಮಾಡಿ ಕೇಳಿದಾಗಲೂ ಅವರು ತಮ್ಮ ಮನೆಯಿಂದ ಹೊರಟಿರುವುದಾಗಿ ಮಾಹಿತಿ ನೀಡಿದ್ದರು. ರಾತ್ರಿ ಇಡೀ ಲಕ್ಷ್ಮಮ್ಮ ಕುರಿತು ಮಾಹಿತಿ ಸಿಗದೆ ಹೋದಾಗ ಬೆಳ್ಳಂಬೆಳಿಗ್ಗೆಯೇ ಆನಂದ್ ಕುಮಾರ್ ತನ್ನ ಹೆಂಡತಿಯನ್ನು ಹುಡುಕಿಕೊಂಡು ಮಾಲೂರಿನತ್ತ ಹೊರಟಿದ್ದರು.

ಅಷ್ಟಕ್ಕೂ ಅಲ್ಲಿ ಮೃತಪಟ್ಟಿದ್ದ ಲಕ್ಷ್ಮಮ್ಮ ಅವರು ದೇಹದ ಮೇಲೆ ಯಾವುದೇ ಗಾಯಗಳಾಗಿರಲಿಲ್ಲ, ಜೊತೆಗೆ ಅದು ಅಪಘಾತ ಎಂದಾಗಿದ್ದರೆ ಆಕೆಯ ಚಪ್ಪಲಿ ಇರಬೇಕಿತ್ತು ಆದರೆ ಚಪ್ಪಲಿ ಇರಲಿಲ್ಲ, ಬರಿಗಾಲಲ್ಲಿ ನಡೆದುಕೊಂಡು ಬಂದಿದ್ದರೆ ಆಕೆಯ ಕಾಲು ದೂಳಾಗಿರಬೇಕಿತ್ತು ಆದರೆ ಕಾಲು ಕ್ಲೀನ್​ ಆಗಿತ್ತು, ಇನ್ನು ಆಕೆಯ ಮೊಬೈಲ್​ ಪ್ಲೈಟ್​ ಮೋಡ್​ನಲ್ಲಿತ್ತು ಹಾಗಾಗಿ ಇದೆಲ್ಲವೂ ಪೊಲೀಸರ ಅನುಮಾನವನ್ನು ಹೆಚ್ಚಿಸಿ ಇದೊಂದು ಕೊಲೆ ಇರಬಹುದು ಎಂದು ಲಕ್ಷ್ಮಮ್ಮ ಸಾವನ್ನು ಅನುಮಾನಾಸ್ಪದ ಎಂದು ಪ್ರಕರಣ ದಾಖಲಿಸಿಕೊಂಡು ನಂತರ ಕುಟುಂಬಸ್ಥರು ನೀಡಿದ ಮಾಹಿತಿ ಪಡೆದಾಗ ಕೆಲವೊಂದು ಅಂಶಗಳು ಕೊಲೆಯ ಸುಳಿವು ನೀಡಿದ್ದವು.

ಈ ವೇಳೆ ಮಾರ್ಗ ಮಧ್ಯೆದಲ್ಲೇ ಹುಂಗೇನಹಳ್ಳಿ ಗೇಟ್​ನಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಮಹಿಳೆಯೊಬ್ಬರ ಶವವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು​. ಈ ವೇಳೆ ಹೋಗಿ ನೋಡಿದ್ರೆ ಅದು ಆನಂದ್ ಕುಮಾರ್ ಪತ್ನಿ ಲಕ್ಷ್ಮಮ್ಮ ಅನ್ನೋದು ತಿಳಿದು ಬಂದಿತ್ತು. ಈ ವೇಳೆ ಅದೊಂದು ಅಪಘಾತ ಎಂದುಕೊಂಡಿದ್ದವರಿಗೆ ಪೊಲೀಸರ ಕೆಲವೊಂದು ಅನುಮಾನದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಬೇರೆಯದ್ದೇ ಕಥೆ ತೆರೆದುಕೊಂಡಿತ್ತು.

ಲಕ್ಷ್ಮಮ್ಮ ಪತಿ ನೀಡಿದ ಸುಳಿವೇನೆಂದರೆ ಅನಂದ್ ಕುಮಾರ್ ಹಾಗೂ ಅವರ ಕುಟುಂಬಕ್ಕೆ ಇತ್ತೀಚೆಗೆ ಅಂದರೆ ಒಂದೆರಡು ವರ್ಷಗಳಿಂದ ರಾಮನಗರ ಜಿಲ್ಲೆ ಸಾತನೂರು ಗ್ರಾಮದ ಕೆಮ್ಮೋಳಿ ಗ್ರಾಮದ ತಿಮ್ಮೇಗೌಡ ಎಂಬಾತ ರಿಯಲ್​ ಎಸ್ಟೇಟ್​, ಭೂಮಿಯನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುವುದು ಸೇರಿದಂತೆ ಹಲವು ವ್ಯವಹಾರಗಳ ಮೂಲಕ ಪರಿಚಯವಾಗಿದ್ದ ಇಬ್ಬರೂ ಒಂದೆರಡು ವ್ಯವಹಾರ ಮಾಡಿ ಒಂದಷ್ಟು ಹಣವನ್ನು ಸಂಪಾದನೆ ಮಾಡಿದ್ರು.

ಹಾಗಾಗಿ ತಿಮ್ಮೇಗೌಡ ಆನಂದ್ ಕುಮಾರ್​ ಅವರ ಕುಟುಂಬಕ್ಕೆ ತೀರಾ ಹತ್ತಿರವಾಗಿದ್ದ, ಅದರ ಜೊತೆಗೆ ತಿಮ್ಮೇಗೌಡ ಪತ್ನಿ ಲೀಲ ಹಾಗೂ ಲಕ್ಷ್ಮಮ್ಮ ಕೂಡಾ ಒಳ್ಳೆ ಸ್ನೇಹಿತರಂತೆ ಇದ್ದರು ಇವರ ಮನೆಗೆ ಅವರು ಬರೋದು ಹೋಗೋದು ನಡೆಯುತ್ತಿತ್ತು. ಜೊತೆಗೆ ಇತ್ತೀಚೆಗೆ ತಿಮ್ಮೇಗೌಡನಿಗೆ ಯಾವುದೋ ಒಂದು ಹಣದ ವ್ಯವಹಾರದಲ್ಲಿ ಸಮಸ್ಯೆ ಎದುರಾದಾಗ ಇದೇ ಆನಂದ್ ಕುಮಾರ್ ಹಾಗೂ ಲಕ್ಷ್ಮಮ್ಮ ಅವರು ಸುಮಾರು 20 ಲಕ್ಷ ರೂಪಾಯಿ ಹಣ ಕೊಟ್ಟು ಸಹಾಯ ಮಾಡಿದ್ರು ಹೀಗೆ ಎರಡು ಕುಟುಂಬದಲ್ಲಿ ಒಂದು ರೀತಿ ಬಾಂಧವ್ಯ ಇತ್ತು.

ಇನ್ನು ಇದೇ ಬಾಂಧವ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದ ತಿಮ್ಮೇಗೌಡ ಆನಂದ್ ಕುಮಾರ್ ಗೆ ತಿಳಿಯದಂತೆ ಲಕ್ಷ್ಮಮ್ಮ ಬಳಿ ಕೂಡಾ 7 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದನಂತೆ, ಇನ್ನು ತಿಮ್ಮೇಗೌಡ ಕೊಡಬೇಕಿದ್ದ ಹಣವನ್ನು ಆನಂದ್ ಕುಮಾರ್​ ವಾಪಸ್​ ಕೊಡುವಂತೆ ಕೇಳಿದಾಗಲೂ ಈ ತಿಮ್ಮೇಗೌಡ ಆನಂದ್ ಕುಮಾರ್ ಪತ್ನಿ ಲಕ್ಷ್ಮಮ್ಮ ಅವರ ಬಳಿ ತೆಗೆದುಕೊಂಡು ಹಣ ಕೊಟ್ಟಿದ್ದನಂತೆ. ಹೀಗಿರುವಾಗಲೇ ಲಕ್ಷ್ಮಮ್ಮ ತಾನು ತನ್ನ ಗಂಡ ಮಕ್ಕಳಿಗೆ ತಿಳಿಯದ ರೀತಿ ತಿಮ್ಮೇಗೌಡನಿಗೆ ಕೊಟ್ಟಿದ್ದ ಹಣವನ್ನು ವಾಪಸ್​ ಕೊಡುವಂತೆ ಒತ್ತಾಯ ಮಾಡುತ್ತಿದ್ದಳು.

ಮತ್ತೊಂದೆಡೆ ಆನಂದ್ ಕುಮಾರ್ ಕೂಡಾ ತನಗೆ ಕೊಡಬೇಕಾದ ಹಣ ವಾಪಸ್​ ಕೊಡುವಂತೆ ತಿಮ್ಮೇಗೌಡನನ್ನು ಒತ್ತಾಯ ಮಾಡುತ್ತಿದ್ದನಂತೆ. ಹಾಗಾಗಿ ಹಣ ಕೊಡಲಾಗದ ತಿಮ್ಮೇಗೌಡ ಈ ಸಮಸ್ಯೆಯಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ಆಲೋಚಿಸಿ ತನ್ನ ಸ್ನೇಹಿತ ಚಿಕ್ಕಬಳ್ಳಾಪುರ ಜಿಲ್ಲೆ ಹಾರೋಬಂಡೆ ನಿವಾಸಿ ಮುನಿಯಪ್ಪ ಎಂಬಾತನ ಸಹಾಯ ಕೇಳಿದ್ದ, ಗಣೇಶ ಹಬ್ಬದ ಮುನ್ನಾದಿನ ಸೆಪ್ಟಂಬರ್​-6 ರಂದು ಲಕ್ಷ್ಮಮ್ಮ ಗಣೇಶ ಹಬ್ಬಕ್ಕೆ ಸಾಮಾನು ತಗೆದುಕೊಂಡು ನಂತರ ತಿಮ್ಮೇಗೌಡ ಪತ್ನಿ ಲೀಲಾರನ್ನು ಹಬ್ಬಕೆ ಮನೆಗೆ ಕರೆದು ಬರಲು ಮಾಲೂರಿಗೆ ಬಂದಿದ್ದಳು.

ಈ ವೇಳೆ ತಿಮ್ಮೇಗೌಡನಿಗೆ ಮೇಲಿಂದ ಮೇಲೆ ಪೋನ್​ ಮಾಡಿ ಹಣ ವಾಪಸ್ ಕೊಡುವಂತೆ ಪೀಡಿಸುತ್ತಿದ್ದಳಂತೆ ಇದರಿಂದ ಕೋಪಗೊಂಡಿದ್ದ ತಿಮ್ಮೇಗೌಡ ತನ್ನ ಸ್ನೇಹಿತ ಮುನಿಯಪ್ಪನಿಗೆ ತಿಳಿಸಿದ್ದ, ಈವೇಳೆ ಇಬ್ಬರೂ ದೊಡ್ಡಕಡತೂರು ತಮ್ಮ ತೋಟದ ಮನೆಯ ಬಳಿ ಪ್ಲಾನ್​ ಮಾಡಿ ಆಕೆಯನ್ನು ಮುಗಿಸಿಬಿಟ್ಟರೆ ಕೊಡುವ ಹಣ ನಮಗೆ ಉಳಿದುಕೊಳ್ಳುತ್ತದೆ ಎಂದು ಪ್ಲಾನ್​ ಮಾಡಿ ತಮ್ಮ ಸ್ವಿಪ್ಟ್​ ಕಾರ್​ನಲ್ಲಿ ಮಾಲೂರಿಗೆ ಹೋಗುತ್ತಾರೆ ಹಬ್ಬದ ಸಾಮಾನು ತೆಗೆದುಕೊಂಡು ಮನೆಗೆ ಹೋಗಲು ನಿಂತಿದ್ದ ಲಕ್ಷ್ಮಮ್ಮರನ್ನು ಕಾರ್​ನಲ್ಲಿ ಹತ್ತಿಸಿಕೊಂಡು ಹಣ ಕೊಡುವುದಾಗಿ ಹೇಳಿ ತಿಮ್ಮೇಗೌಡ ಹಾಗೂ ಮುನಿಯಪ್ಪ ಇಬ್ಬರು ಮಾಲೂರಿನ ಡೊಡ್ಡಕಡತೂರು ಗ್ರಾಮದ ಬಳಿ ಇರುವ ಎಂ.ಎಂ.ಲೇಔಟ್​ನಲ್ಲಿ ಕುತ್ತಿಗೆ ಹಿಸುಕಿ ಸಾಯಿಸಿ ನಂತರ ಆಕೆಯನ್ನು ಹುಂಗೇನಹಳ್ಳಿ ಗೇಟ್​ನಲ್ಲಿ ತಂದು ಬಿಸಾಡಿ ಹೋಗ್ತಾರೆ.

ಇನ್ನು ಗಣೇಶ ಹಬ್ಬದ ದಿನ ಬೆಳಿಗ್ಗೆ ಶವ ಸಿಕ್ಕ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಇದು ಅಪಘಾತದಿಂದಾಗಿರುವ ಸಾವಲ್ಲ ಅನ್ನೋದನ್ನು ಹೇಳುತ್ತಿದ್ದಂತೆ ತಿಮ್ಮೇಗೌಡ ತನ್ನ ಹೆಂಡತಿ ಲೀಲಾರನ್ನು ಕರೆದುಕೊಂಡು ಚಿಕ್ಕಬಳ್ಳಾಪುರದ ಮುನಿಯಪ್ಪನ ಮನೆಗೆ ಹೋಗುತ್ತಾರೆ. ಈವೇಳೆ ಪೊಲೀಸರಿಗೆ ಅನುಮಾನ ಬಂದು ತಿಮ್ಮೇಗೌಡ ಹಾಗೂ ಮುನಿಯಪ್ಪರನ್ನು ಹುಡುಕಿದಾಗ ಇಬ್ಬರು ತಲೆಮರೆಸಿಕೊಂಡಿದ್ದರು ಆಗ ಪೊಲೀಸರಿಗೆ ತಮ್ಮ ಅನುಮಾನ ನಿಜವಾಗುತ್ತದೆ ಆಗ ಎಸ್ಪಿ ನಿಖಿಲ್.ಬಿ ಅವರು ಆರೋಪಿಗಳ ಪತ್ತೆಗೆ​ ಎರಡು ವಿಶೇಷ ತಂಡ ರಚನೆ ಮಾಡಿ ಆರೋಪಿಗಳನ್ನು ಪತ್ತೆ ಮಾಡಿ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಕರೆತಂದು ಪೊಲೀಸರು ತಮ್ಮ ಸ್ಟೈಲ್​ನಲ್ಲಿ ವಿಚಾರಣೆ ನಡೆಸಿದಾಗ ತಾವು ಕೊಲೆಗಾರಿ ಮಾಡಿದ ಪ್ಲಾನ್​ ಎಲ್ಲವನ್ನೂ ಬಾಯಿ ಬಿಟ್ಟಿದ್ದಾರೆ.

ಸೆಂಟ್ರಲ್​ ಜೈಲಿನಲ್ಲಿ ಸ್ನೇಹಿತರಾಗಿದ್ದವರಿಂದ ಕೊಲೆ ಮಾಡಿ ಮತ್ತೆ ಜೈಲಿಗೆ..!

ಚಿಕ್ಕಬಳ್ಳಾಪುರದ ಹಾರೋಬಂಡೆ ನಿವಾಸಿ ಮುನಿಯಪ್ಪನಿಗೂ, ರಾಮನಗರ ಜಿಲ್ಲೆ ಸಾತನೂರಿನ ತಿಮ್ಮೇಗೌಡನಿಗೂ ಪ್ರೆಂಡ್​ ಶಿಪ್​ ಹೇಗೆ ಎಂದು ಕೇಳಿದ್ರೆ, ಈ ಇಬ್ಬರೂ ಆಸಾಮಿಗಳು ಈಮೊದಲೇ ಕೊಲೆ ಆರೋಪದಲ್ಲಿ ಜೈಲುವಾಸ ಅನುಭವಿಸಿ ಬಂದಿದ್ದಾರೆ. ತಿಮ್ಮೇಗೌಡ ಬೆಂಗಳೂರಿನಲ್ಲಿ ಬಾರ್​ ಒಂದರಲ್ಲಿ ಕ್ಯಾಷಿಯರ್ ಕೆಲಸ ಮಾಡುವ ವೇಳೆ ಶ್ರೀನಿವಾಸಮೂರ್ತಿ ಎಂಬಾತನನ್ನು ಕೊಲೆ ಮಾಡಿದ್ದ, ಇನ್ನು ಮುನಿಯಪ್ಪ ಕೂಡಾ ನಂದಗುಡಿ ಬಳಿ ಮುನಿರಾಜು ಎಂಬಾತನ್ನು ಕೊಂದು ಜೈಲು ಪಾಲಾಗಿದ್ದ ಈ ವೇಳೆ ಜೈಲು ಶಿಕ್ಷೆ ಅನುಭವಿಸುವ ವೇಳೆ ಇಬ್ಬರೂ ಕೂಡಾ ಸ್ನೇಹಿತರಾಗಿದ್ದರು.

ಅದೇ ಸ್ನೇಹದ ಹಿನ್ನೆಲೆ ಸೆಪ್ಟಂಬರ್-6 ರಂದು ಮುನಿಯಪ್ಪ ಮಾಲೂರಿಗೆ ಬಂದಿದ್ದ, ಈವೇಳೆ ಲಕ್ಷ್ಮ್ಮಮ್ಮ ಹಣಕ್ಕಾಗಿ ಪದೇ ಪದೇ ಪೋನ್​ ಮಾಡಿದ್ದನ್ನು ನೋಡಿ ತಾವು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದ ದೊಡ್ಡಕಡತ್ತೂರು ತೋಟದ ಮನೆ ಬಳಿ ಕೂತು ಪ್ಲಾನ್​ ಮಾಡಿ ನಂತರ ಇಬ್ಬರೂ ಬಾರ್​ಗೆ ಹೋಗಿ ಕುಡಿದು ನಂತರ, ಮಾಲೂರಿನಲ್ಲಿದ್ದ ಲಕ್ಷ್ಮಮ್ಮರನ್ನು ಕಾರ್​ನಲ್ಲಿ ಕೂರಿಸಿಕೊಂಡು ಬಂದು ಕುತ್ತಿಗೆ ಹಿಸುಕಿ ಕೊಲೆ ಮಾಡಿ ನಂತರ ಶವವನ್ನು ಹುಂಗೇನಹಳ್ಳಿ ಬಳಿ ಬಿಸಾಡಿ ರಾತ್ರಿ ಇಡೀ ಸುತ್ತಾಡಿ ನಂತರ ಬೆಳಿಗ್ಗೆ ಪರಾರಿಯಾಗಿದ್ದರು. ಸದ್ಯ ಆರೋಪಿಗಳ ಬೆನ್ನುಬಿದ್ದಿದ್ದ ಪೊಲೀಸರು ಆರೋಪಿಗಳನ್ನು ಹಿಡಿದು ತಂದು ಎರಡು ಒದೆಯುತ್ತಿದ್ದಂತೆ ನಿಜಾಂಶ ಹೊರ ಬಂದಿತ್ತು.

Previous Post

ಪ್ರಧಾನಿ ನಿವಾಸಕ್ಕೆ ವಿಶೇಷ ಅತಿಥಿಯ ಆಗಮನ!

Next Post

ಬಂಟ್ವಾಳ ತಾಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾಗಿ ಯತೀಶ್ ಹಡೀಲು ಆಯ್ಕೆ

OtherNews

ಲೋನ್ ಕಟ್ಟದ ಕಾರುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್..!
ಕ್ರೈಮ್

ಲೋನ್ ಕಟ್ಟದ ಕಾರುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್..!

September 23, 2026
ಕೆಆರ್‌ಐಡಿಎಲ್‌ ಲಂಚ ಪ್ರಕರಣ; ಇಬ್ಬರು ಸಚಿವರ ರಾಜೀನಾಮೆ ಪಡೆಯಿರಿ, ಸಿಬಿಐ ತನಿಖೆಗೆ ನೀಡಿ: ಅಶೋಕ್‌..!!
ಕ್ರೈಮ್

ಕೆಆರ್‌ಐಡಿಎಲ್‌ ಲಂಚ ಪ್ರಕರಣ; ಇಬ್ಬರು ಸಚಿವರ ರಾಜೀನಾಮೆ ಪಡೆಯಿರಿ, ಸಿಬಿಐ ತನಿಖೆಗೆ ನೀಡಿ: ಅಶೋಕ್‌..!!

September 3, 2026
ಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ: ಯತೀಂದ್ರ..!
ಬೆಂಗಳೂರು

ಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ: ಯತೀಂದ್ರ..!

August 26, 2026
ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ಐತಿಹಾಸಿಕ ಗೆಲುವು : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆ..!!
ಪುತ್ತೂರು

ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ಐತಿಹಾಸಿಕ ಗೆಲುವು : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ಆಯ್ಕೆ..!!

August 25, 2026
ಮಹಿಳಾ ಪೊಲೀಸ್ ಅಧಿಕಾರಿಯ ಅರೆಬೆತ್ತಲೆ ವಿಡಿಯೋ ವೈರಲ್; ಸೂತ್ರಧಾರಿಗಳ ಹೆಸರು ಬಹಿರಂಗ..!!
ಕ್ರೈಮ್

ಮಹಿಳಾ ಪೊಲೀಸ್ ಅಧಿಕಾರಿಯ ಅರೆಬೆತ್ತಲೆ ವಿಡಿಯೋ ವೈರಲ್; ಸೂತ್ರಧಾರಿಗಳ ಹೆಸರು ಬಹಿರಂಗ..!!

August 21, 2026
ಜೈಲಿಗೆ ಹಾಕಿ, ನೇಣು ಹಾಕಿದ್ರೂ ನಾವು ‘ವಂದೇ ಮಾತರಂ’ ಗೀತೆಯನ್ನ ಎರಡೇ ಪ್ಯಾರಾ ಹಾಡೋದು: ಬಿ.ಕೆ.ಹರಿಪ್ರಸಾದ್‌
ಬೆಂಗಳೂರು

ಜೈಲಿಗೆ ಹಾಕಿ, ನೇಣು ಹಾಕಿದ್ರೂ ನಾವು ‘ವಂದೇ ಮಾತರಂ’ ಗೀತೆಯನ್ನ ಎರಡೇ ಪ್ಯಾರಾ ಹಾಡೋದು: ಬಿ.ಕೆ.ಹರಿಪ್ರಸಾದ್‌

August 18, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಗಿರಿಜಾ ಕಲ್ಯಾಣೋತ್ಸವ : ಪ್ರಾರ್ಥನೆ..!

ಪುತ್ತೂರು: ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ಗಿರಿಜಾ ಕಲ್ಯಾಣೋತ್ಸವ : ಪ್ರಾರ್ಥನೆ..!

September 23, 2026
ಪಿಲಿಗೊಬ್ಬು ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥನೆ..!!

ಪಿಲಿಗೊಬ್ಬು ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥನೆ..!!

September 23, 2026
ಲೋನ್ ಕಟ್ಟದ ಕಾರುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್..!

ಲೋನ್ ಕಟ್ಟದ ಕಾರುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್..!

September 23, 2026
ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ : ಪುತ್ತೂರು ನಗರಸಭೆಗೆ 6.5 ಕೋಟಿ , ವಿಟ್ಲ ಪ.ಪಂ ಗೆ 3.5 ಕೋಟಿ; ಶಾಸಕ ಅಶೋಕ್ ರೈ..!

September 23, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.