ಬೆಂಗಳೂರು: 19 ಜಿಲ್ಲೆಗಳಲ್ಲಿ ಮುಂದಿನ ಸೋಮವಾರದಿಂದ ಲಾಕ್ಡೌನ್ ಸಡಿಲಿಕೆಗೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಲಾಕ್ಡೌನ್ ಸಡಿಲಿಕೆಗೆ ಮಾರ್ಗಸೂಚಿಯನ್ನ ಪ್ರಕಟಿಸಿದೆ.
ಪ್ರತಿ ದಿನ ಯಾವುದಕ್ಕೆಲ್ಲಾ ಅನುಮತಿ..?
- ದಿನಸಿ ಖರೀದಿ ಅವಧಿ ಮಧ್ಯಾಹ್ನ 2ರವರೆಗೆ ವಿಸ್ತರಣೆ
- ಬೀದಿ ಬದಿ ವ್ಯಾಪಾರಕ್ಕೆ ಮಧ್ಯಾಹ್ನ 2ರವರೆಗೆ ಅವಕಾಶ
- ಬಾರ್‌ಗಳು ಮಧ್ಯಾಹ್ನ 2 ಗಂಟೆವರೆಗೆ ಓಪನ್ ಇರಲಿವೆ
- ಬಾರ್‌ಗಳಲ್ಲಿ ಮದ್ಯ ಪಾರ್ಸೆಲ್‌ಗೆ ಮಾತ್ರ ಅವಕಾಶ
- ಕಟ್ಟಡ ಕಾಮಗಾರಿ, ಸಾಮಗ್ರಿಗಳಿಗೆ ಸಂಪೂರ್ಣ ಅವಕಾಶ
- ಕೈಗಾರಿಕೆಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಅವಕಾಶ
- ಗಾರ್ಮೆಂಟ್ಸ್‌ಗಳಲ್ಲಿ ಶೇ.30ರಷ್ಟು ಸಿಬ್ಬಂದಿಗೆ ಅವಕಾಶ
- ಪಾರ್ಕ್‌ಗಳಲ್ಲಿ ಬೆಳಗ್ಗೆ 5ರಿಂದ 10ರವರೆಗೆ ಅವಕಾಶ
- ಕಟ್ಟಡ, ಸಿಮೆಂಟ್, ಸ್ಟೀಲ್ ಅಂಗಡಿಗಳಿಗೆ ಅವಕಾಶ
- ಆಟೋ, ಟ್ಯಾಕ್ಸಿಗಳಲ್ಲಿ ಇಬ್ಬರಿಗೆ ಮಾತ್ರ ಅವಕಾಶ
- ಹೋಟೆಲ್, ರೆಸ್ಟೋರೆಂಟ್‌ನಲ್ಲಿ ಪಾರ್ಸೆಲ್‌ಗೆ ಅವಕಾಶ
- ಹೋಮ್ ಡೆಲಿವರಿಗೆ 24 ಗಂಟೆಯೂ ಅವಕಾಶ
ನೈಟ್ ಕರ್ಫ್ಯೂಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟ
- ಸಂಜೆ 7ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ
- ತುರ್ತು ಆರೋಗ್ಯ ಸೇವೆಗೆ ಮಾತ್ರ ಅನುಮತಿ
- ರಾತ್ರಿ ಪಾಳಿ ಕೆಲಸ ಮಾಡುವ ಸಂಸ್ಥೆಗಳಿಗೆ ಅವಕಾಶ
- ಸಂಸ್ಥೆಯ ಐಡಿ ಕಾರ್ಡ್/ ಅನುಮತಿ ಪತ್ರ ಕಡ್ಡಾಯ
- ಟೆಲಿಕಾಂ, ಇಂಟರ್ನೆಟ್ ಸೇವಾದಾರರಿಗೂ ಅನುಮತಿ
- ಆಸ್ಪತ್ರೆ, ತುರ್ತು ಸೇವೆ, ಫಾರ್ಮಸಿಗೆ ಅನುಮತಿ
- ಗೂಡ್ಸ್ ವಾಹನಗಳ ಓಡಾಟಕ್ಕೆ ನಿರ್ಬಂಧವಿಲ್ಲ
- ರೈಲು, ವಿಮಾನ ಸೇವೆ ಪ್ರಯಾಣಿಕರಿಗೆ ಅನುಮತಿ
- ನಿಲ್ದಾಣದಿಂದ ಆಟೋ, ಟ್ಯಾಕ್ಸಿ ಸೇವೆಗೆ ಅನುಮತಿ
- ಆಯ್ದ ನಗರಗಳಲ್ಲಿ ಸಾರ್ವಜನಿಕ ಸಾರಿಗೆಗೆ ಅನುಮತಿ
ವೀಕೆಂಡ್ ಕರ್ಫ್ಯೂಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟ
- ಶುಕ್ರವಾರ ಸಂಜೆ 7ರಿಂದ ವೀಕೆಂಡ್ ಕರ್ಫ್ಯೂ ಆರಂಭ
- ಸೋಮವಾರ ಬೆಳಗ್ಗೆ 5 ರವರೆಗೆ ವೀಕೆಂಡ್ ಕರ್ಫ್ಯೂ
- ದಿನಸಿ ಖರೀದಿ ಅವಧಿ ಮಧ್ಯಾಹ್ನ 2ರವರೆಗೆ ವಿಸ್ತರಣೆ
- ತುರ್ತು, ಅಗತ್ಯಸೇವೆಗೆ ಸಂಬಂಧಿಸಿದ ಕಚೇರಿ ಓಪನ್
- ತುರ್ತು ಸೇವೆಗೆ ಸಂಬಂಧಿಸಿದ ಖಾಸಗಿ ಸಂಸ್ಥೆಗಳೂ ಓಪನ್
- ಆಸ್ಪತ್ರೆಗೆ ತೆರಳುವ ರೋಗಿಯ ಸಂಬಂಧಿಕರಿಗೆ ಅನುಮತಿ
- ಟೆಲಿಕಾಂ, ಇಂಟರ್ನೆಟ್ ಸೇವಾದಾರರಿಗೂ ಅನುಮತಿ
- ಹೋಟೆಲ್, ರೆಸ್ಟೋರೆಂಟ್‌ನಲ್ಲಿ ಪಾರ್ಸೆಲ್‌ಗೆ ಅನುಮತಿ
- ರೈಲು, ವಿಮಾನ ಸೇವೆ ಪ್ರಯಾಣಿಕರಿಗೆ ಅನುಮತಿ
- ನಿಲ್ದಾಣದಿಂದ ಆಟೋ, ಟ್ಯಾಕ್ಸಿ ಸೇವೆಗೆ ಅನುಮತಿ