ಬೆಳ್ತಂಗಡಿ : ತಾಲೂಕು ಯುವ ಬಿಲ್ಲವ ವೇದಿಕೆ ವತಿಯಿಂದ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆಸರೆಯಾಗುವ ಉದ್ದೇಶದಿಂದ “ಶ್ರೀ ಗುರು ಸೇವೆ ” ಎಂಬ ಸೇವಾ ಯೋಜನೆಯನ್ನು ನಡೆಸುತ್ತಿದ್ದು, ಐದನೇ ಸೇವಾ ಯೋಜನೆಯಾಗಿ, ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕಾಯರಡ್ಕ ಮನೆಯ ಶ್ರೀಮತಿ ರೇವತಿ ಹಾಗೂ ಜನಾರ್ಧನ ಪೂಜಾರಿ ಯವರ ಪ್ರಥಮ ಪುತ್ರಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತಿದ್ದು, ಬಾಲಕಿಯ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಿರುವುದರಿಂದ ಬಡಕುಟುಂಬಕ್ಕೆ ಕೈಲಾದಷ್ಟು ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಅವರ ಮನೆಗೆ ಭೇಟಿ ನೀಡಿ, ದಾನಿಗಳಿಂದ ಸಂಗ್ರಹಿಸಿದ್ದ ಸಹಾಯಧನವನ್ನು ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾದ ರಂಜಿತ್ ಹೆಚ್. ಡಿ ಬಳಂಜ ರವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಯುವ ಬಿಲ್ಲವ ವೇದಿಕೆಯ ಉಪಾಧ್ಯಕ್ಷರುಗಳಾದ ಪುನೀತ್ ಕುಮಾರ್ ಮಡಂತ್ಯಾರ್ ಮತ್ತು ಗುರುಪ್ರಸಾದ್ ಉಜಿರೆ, ಕೋಶಾಧಿಕಾರಿ ಹರೀಶ್ ಕಲ್ಲಾಜೆ ಶಿರ್ಲಾಲ್ , ತಾಲೂಕು ಯುವ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷರಾದ ಚಿದಾನಂದ ಇಡ್ದ್ಯಾ, ಬಲಿಷ್ಠ ಬಿಲ್ಲವೆರ್ ತಂಡದ ಸಂಪತ್ ಅಂಚನ್, ಸಂದೀಪ್ ಪೂಜಾರಿ ಕುಕ್ಕೇಡಿ, ಪ್ರಜ್ವಲ್ ಬಿರ್ವ ಮದ್ದಡ್ಕ, ಗುರುನಾರಾಯಣ ಸ್ವಾಮಿ ಸೇವಾ ಸಂಘ ತಣ್ಣೀರುಪಂಥ ಇದರ ಮಾಜಿ ಕಾರ್ಯದರ್ಶಿ ಸತೀಶ್ ಕರ್ಕೇರ ದೇಶಿನ್ಕೋಡಿ, ಅರುಣ್ ಕುಮಾರ್ ಅಲಕ್ಕೆ ತಣ್ಣೀರುಪಂಥ ಉಪಸ್ಥಿತರಿದ್ದರು.