ಕ್ಯಾನ್ಸರ್ ಅನ್ನುವ ಮಹಾಮಾರಿಯ ಆಕ್ರಮಣದ ಕಾರಣಕ್ಕೆ ಹಲವರು ತಮ್ಮ ಕೇಶಗಳನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಕ್ಯಾನ್ಸರ್‌ನಿಂದ ತಲೆ ಕೂದಲನ್ನು ಕಳೆದುಕೊಂಡಿರುವ ಒಬ್ಬರ ಮುಖದಲ್ಲಿ ಮಂದಹಾಸ ಮೂಡಿಸಬೇಕೆಂಬ ಆಕಾಂಕ್ಷೆ ಹಲವರಲ್ಲಿರುತ್ತದೆ.ಇನ್ನು ಮುಂದೆ ಈ ರೀತಿ ಸಹಕಾರಿಯಾಗಬೇಕು ಎಂದು ಹಂಬಲಿಸುವವರಿಗೆ ಇಲ್ಲಿದೆ ತಮ್ಮ ಕೇಶದಿಂದ ಸ್ವಲ್ಪವನ್ನು ದಾನ ಮಾಡುವ ಅವಕಾಶ.

ಹೌದು, ಇದೀಗ ಮುಳಿಯ ಪ್ರತಿಷ್ಠಾನ, ರೋಟರಿ ಪುತ್ತೂರು ಈಸ್ಟ್, ರೋಟರಿ ಪುತ್ತೂರು ಸಿಟಿ, ಜೆಸಿಐ ಪುತ್ತೂರು, ಜೆಸಿರೇಟ್ ಪುತ್ತೂರು, ಇನ್ನರ್‌ವೀಲ್ ಪುತ್ತೂರು, ಲೇಡೀಸ್ ಬ್ಯೂಟೀ ಅಸೋಸಿಯೇಷನ್, ಹೇರ್ ಕ್ರೌನ್ ಸಂಸ್ಥೆಗಳ ಸಹಭಾಗಿತ್ವದೊಡನೆ ಇಂತಹ ವಿಶೇಷವಾದ ಪರಿಕಲ್ಪನೆ ಮೂಡಿಬಂದಿದ್ದು, ಈಗ ಕೇಶದಾನಕ್ಕೂ ಮಹತ್ವದ ಜತೆಗೆ ಕೇಶದಾನಿಗಳಿಗೊಂದು ಇಂತಹ ಅವಕಾಶವನ್ನು ನೀಡಲಾಗುತ್ತಿದೆ.
ಕೇಶದಾನ ಮಾಡುವುದರಿಂದ ತಾವು ಅತ್ಯಂತ ಸರಳ ರೀತಿಯಲ್ಲಿ ಇತರರಿಗೆ ನೆರವಾದಂತಾಗುತ್ತದೆ. ಹಾಗಾದರೆ ನಮ್ಮದೇ ಊರಿನಲ್ಲಿ ಇಂತಹ ಅವಕಾಶ ದೊರೆಯುವಾಗ ಈ ಸಹಾಯ ಮಾಡದೇ ಇರಲು ಸಾಧ್ಯವೇ?ಅದರಲ್ಲೂ ಇಲ್ಲಿರುವ ಸ್ಥಳಕ್ಕೆ ಧಾವಿಸಿ ಕೂದಲು ಕತ್ತರಿಸಿಕೊಳ್ಳಲು ಅನಾನುಕೂಲವಾದಲ್ಲಿ ಮನೆಯಲ್ಲೇ ಕತ್ತರಿಸಿ ಕೊಡಬಹುದಾದ ಅವಕಾಶವೂ ಇಲ್ಲಿದೆ. ಈ ಮುಖೇನ ಇನ್ನೊಬ್ಬರ ಮುಖದಲ್ಲಿ ಭರವಸೆಯ ನಗುವನ್ನು ತರುವ ನಿಮ್ಮ ಆಸೆ ಫಲಶ್ರುತಿಗೊಳ್ಳಿದೆ.
ನಿಮ್ಮೂಲಕ ಇಂತಹ ಸಹಾಯಗಳನ್ನು ಮಾಡಿ ಇನ್ನೊಬ್ಬರಿಗೆ ನೆರವಾಗಲು ಸಂಪರ್ಕಿಸಿ;
ಮುಳಿಯ ಫೌಂಡೇಷನ್
ಮುಳಿಯ ಜ್ಯುವೆಲ್ಸ್
ಕೋರ್ಟ್ ರಸ್ತೆ,ಪುತ್ತೂರು
963267916
9164937450