ಪುತ್ತೂರು : ಸುಮಾರು 51 ವರುಷಗಳಿಂದ ವಾಹನಕ್ಕೆ ಸಾಲವನ್ನು ನೀಡುತ್ತಿರುವ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್, ಸಾರಿಗೆ ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಮಿಕರ ಮತ್ತು ಮಾಲಕರ ಮಕ್ಕಳ ಕಲಿಕೆಗಾಗಿ 11 ವರುಷಗಳಿಂದ ವಿದ್ಯಾರ್ಥಿ ನಿಧಿಯನ್ನು ನೀಡುವ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ.
ಅ.5 ರಂದು ವಿದ್ಯಾರ್ಥಿ ನಿಧಿ ವಿತರಣಾ ಸಮಾರಂಭ ಪುತ್ತೂರಿನ ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಲಿದೆ.
ಭಾರತದಾದ್ಯಂತ ಸುಮಾರು 3,500 ಶಾಖೆಗಳನ್ನು ಒಳಗೊಂಡಿರುವ ಅತೀ ದೊಡ್ಡ ಹಣಕಾಸು ಸಂಸ್ಥೆಯಾಗಿರುವ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ಸಾರಿಗೆ ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಮಿಕರ ಮತ್ತು ಮಾಲಕರ ಮಕ್ಕಳ ಕಲಿಕೆಗಾಗಿ 8ನೇ ತರಗತಿಯಿಂದ 12ನೇ ತರಗತಿವರೆಗೆ ವಿದ್ಯಾರ್ಥಿನಿಧಿ ನೀಡುತ್ತಿದ್ದು, ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ 4,000 ರೂ. ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ 4,500 ರೂ. ವಿದ್ಯಾರ್ಥಿ ನಿಧಿ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಅ.5ರಂದು ಪುತ್ತೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 1008 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ನೀಡಲಾಗುತ್ತಿದೆ.
ದಕ್ಷಿಣ ಕನ್ನಡದಲ್ಲಿ 2017 ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ಉದ್ದೇಶದಿಂದ ವಿದ್ಯಾರ್ಥಿ ನಿಧಿ ನೀಡಲಾಗುತ್ತಿದೆ.
ಪುತ್ತೂರು, ಬಂಟ್ವಾಳ, ಸುಳ್ಯ, ನೆಲ್ಯಾಡಿ ಪ್ರದೇಶಗಳ ಸಾರಿಗೆ ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಮಿಕರ ಮತ್ತು ಮಾಲಕರ ಮಕ್ಕಳಿಗೆ ನಾಳೆ (ಅ.5) ನಡೆಯುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಿಧಿ ಹಸ್ತಾಂತರಿಸಲಿದ್ದಾರೆ.
ಎಸ್.ಎಫ್.ಎಲ್. ಝೋನಲ್ ಬಿಸಿನೆಸ್ ಹೆಡ್ ಶರತ್ಚಂದ್ರ ಭಟ್ ಕಾಕುಂಜೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಅಶೋಕ್ ಕುಮಾರ್ ರೈ, ಭಾಗೀರಥಿ ಮುರುಳ್ಯ ವಿದ್ಯಾರ್ಥಿ ನಿಧಿ ವಿತರಣೆ ಮಾಡಲಿದ್ದಾರೆ.
ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾದ ಕಾವು ಹೇಮಾನಾಥ್ ಶೆಟ್ಟಿ, ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಹೆಚ್. ವಿಶ್ವನಾಥ ಅಜಿಲ, ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಜಾನ್ಸನ್ ಡಿಸೋಜ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಶ ಕುಮಾರ್, ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಶ್ರೀವತ್ಸರಾಜ್ ಎಂ.ಜಿ., ಕೆಂಪುಕಲ್ಲು ಉತ್ಪಾದಕರು ಮತ್ತು ಮಾರಾಟಗಾರರ ಸಂಘದ ಅಧ್ಯಕ್ಷರಾದ ಹೇಮಚಂದ್ರ ಎ.ಪಿ., ಉದ್ಯಮಿಗಳಾದ ಮುರಳಿಕೃಷ್ಣ ಹಸಂತಡ್ಕ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಎಸ್. ಎಫ್.ಎಲ್. ನ ಝೋನಲ್ ಕಲೆಕ್ಷನ್ ಹೆಡ್ ನಾಗರಾಜ್ ಬಿ., ಎಸ್. ಎಫ್.ಎಲ್. ನ ಸ್ಟೇಟ್ ಹೆಡ್ ಸದಾಶಿವ, ಎಸ್. ಎಫ್.ಎಲ್. ನ ಝೋನಲ್ ಪ್ರಾಡಕ್ಟ್ ಹೆಡ್ ಚಂದ್ರಹಾಸ್ ಆಳ್ವ, ಎಸ್. ಎಫ್.ಎಲ್. ನ ರೀಜನಲ್ ಹೆಡ್ ಚೇತನ್ ಅರಸ್, ರೀಜನಲ್ ಬಿಸಿನೆಸ್ ಹೆಡ್ ಮಹೇಶ್ ಕುಮಾರ್ ಸಿ. ಯಚ್., ರೀಜನಲ್ ಸೇಲ್ಸ್ ಹೆಡ್ ಜಯಪ್ರಕಾಶ್ ರೈ ಬಿ. ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ನ ಪುತ್ತೂರು, ಸುಳ್ಯ, ಬಂಟ್ವಾಳ, ನೆಲ್ಯಾಡಿ ಶಾಖೆಯ ಶಾಖಾ ಪ್ರಬಂಧಕರು ಮತ್ತು ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
