ಪುತ್ತೂರು : ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯನ್ನು ಖಂಡಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಕೆದಂಬಾಡಿ ಗ್ರಾಮದ ವತಿಯಿಂದ ತಿಂಗಳಾಡಿ ಜಂಕ್ಷನ್ ನಲ್ಲಿ “100 ನಾಟ್ಔಟ್” ಎಂಬ ಟ್ಯಾಗ್ ಲೈನ್ ನೊಂದಿಗೆ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ಮನೋಹರ್ ರೈ ಎಂಡೆಸಾಗು ರವರು ವಹಿಸಿದ್ದರು. ಹಬೀಬ್ ಕಣ್ಣೂರು ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು.ಮೆಲ್ವಿನ್ ಮೊಂತೆರೋ ಕಾರ್ಯಕ್ರಮ ನಿರೂಪಿಸಿದರು. ರಫೀಕ್ ಎನ್. ಎಸ್, ಮೋಹನ್ ರೈ,ಹಾರಿಸ್ ಬೋಳೋಡಿ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಉಸ್ಮಾನ್.ಕೆ, ಮುರಳಿ, ಇಸ್ಮಾಯಿಲ್ ಟಿ. ಎಮ್, ಭಾಸ್ಕರ ಕೆ, ಆಸ್ಸಾರ್ ಟಿ. ಎಸ್, ದಾಮೋದರ ನಾಯ್ಕ, ಸಿದ್ಧಿಕ್, ಸವಾದ್ ತಿಂಗಳಾಡಿ, ಗೋವಿಂದ ನಾಯ್ಕ, ಆಸ್ಸಾರ್ ನಿದ್ಯಣ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.