ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಪುತ್ತೂರು ಹಾಗೂ ಶಕುಂತಲಾ ಟಿ ಶೆಟ್ಟಿ ಅಭಿಮಾನಿ ಬಳಗ ವತಿಯಿಂದ ಪುತ್ತೂರು ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮವು ಜೂ. 17ರಂದು ನಡೆಯಿತು.
ಕರ್ನಾಟಕ ಸರಕಾರದ ಮಾಜಿ ಸಚಿವರು, ಪುತ್ತೂರಿನ ಮಾಜಿ ಶಾಸಕರು, ಕೋಟಿ ಚೆನ್ನಯ ಕಂಬಳ ಸಮಿತಿಯ ಗೌರವ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆಯವರು ಅಂಗನವಾಡಿ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಅಂಗನವಾಡಿ ಕಾರ್ಯಕರ್ತರು ಸಮಾಜದ ಅವಿಭಾಜ್ಯ ಅಂಗವಾಗಿದ್ದು ಪ್ರತಿಯೊಂದು ಮನೆಯಲ್ಲಿ ಆರೋಗ್ಯವನ್ನು ಕಾಪಾಡುವಲ್ಲಿ ಇವರ ಸೇವೆ ಶ್ಲಾಘನೀಯವಾಗಿದೆ. ರಾತ್ರಿ ಹಗಲೆನ್ನದೆ ಸೇವೆ ಮಾಡುತ್ತಿರುವ ಇವರನ್ನು ಸರಕಾರವು ಸರಿಯಾಗಿ ಗುರುತಿಸದಿದ್ದರೂ ನಾವು ನಿಮ್ಮನ್ನು ಗುರುತಿಸುತ್ತೇವೆ ಎಂದು ಅವರು ಹೇಳಿದರು. ಕೆಲವು ದಿನಗಳ ಹಿಂದೆ ನಗರದ ಆಶಾ ಕಾರ್ಯಕರ್ತೆಯರಿಗೆ ಕಿಟ್‌ನ್ನು ವಿತರಿಸಲಾಗಿದ್ದು ಹಾಗೂ ಅಂಗನವಾಡಿ ಕಾರ್ಯಕರ್ತರು ಸಂಖ್ಯೆ ಜಾಸ್ತಿ ಇದ್ದುದರಿಂದ ಆ ಸಂದರ್ಭದಲ್ಲಿ ಅವರಿಗೆ ಕಿಟ್‌ನ್ನು ವಿತರಿಸಲು ಸಾಧ್ಯವಾಗಲಿಲ್ಲ. ಇದೀಗ ಎಲ್ಲರ ಸಹಕಾರದಿಂದ ಕಿಟ್‌ನ್ನು ವಿತರಿಸಲಾಗಿದೆ. ಇದು ಕಿಂಚಿತ್ತು ಸೇವೆಯಾದರೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಾಜದಲ್ಲಿ ಇನ್ನಷ್ಟು ಕೆಲಸಕಾರಗಳನ್ನು ಮಾಡಲು ಉತ್ತೇಜನಕವಾಗಲಿದೆ ಎಂದು ಅವರು ಹೇಳಿದರು. ನಾನು ಶಾಸಕಿಯಾಗಿದ್ದ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಅವರ ಕೆಲಸಕ್ಕೆ ಸರಿಯಾಗಿ ವೇತನ ಸಿಗದಿದ್ದಾಗ ನಾನು ಅವರ೨೦೦೦ರೂಪಾಯಿಗೆ ಏರಿಸುವಲ್ಲಿ ಶ್ರಮಿಸಿದ್ದೇನೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಪ್ರಸಾದ್ ಕೌಶಲ್ ಶೆಟ್ಟಿ, ಪುತ್ತೂರು ಅಮೆಚೂರ್ ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಲಿ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಶೇಖರ್ ಜೈನ್ ನಿರ್ಪಾಜೆ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಉಪಾಧ್ಯಕ್ಷ ಗಂಗಾಧರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕಂಬಳ ಸಮಿತಿಯ ಪದಾಧಿಕಾರಿ ಹಾಗೂ ದ.ಕ.ಜಿಲ್ಲಾ ಪ್ರಧಾನ ಕಾಠ್ಯದರ್ಶಿಯಾಗಿರುವ ಮುರಳೀಧರ ರೈ ಮಠಂತಬೆಟ್ಟುರವರು ಕಾಠ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಕಾರಿ ಸಂಘದ ಸದಸ್ಯೆ ಅರುಣಾ ಬೀರಿಗರವರು ವಂದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಮ್ ಡಿಸೋಜ, ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾಠ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಬನ್ನೂರು ಸೇವಾ ಸಹಕಾರಿ ಸಂಘದ ನಿರ್ದೇಶಕ ಸುಬ್ರಹ್ಮಣ್ಯ ಗೌಡ ಹನಿಯೂರು, ಕಾಂಗ್ರೆಸ್ ಮುಖಂಡ ಶಿವರಾಮ ಆಳ್ವ,ನಗರಸಭಾ ಸದಸ್ಯ ರಿಯಾಜ್, ರೋಶನ್ ರೈ ಬನ್ನೂರು, ವಿಕ್ರಂ ಶೆಟ್ಟಿ ಹಂತರ, ಶರೋನ್ ಸಿಕ್ವೆರಾ, ರಶೀದ್ ಮುರ,ಹಸೈನಾರ್ ಬನಾರಿ, ವಿಕ್ಟರ್ ಪಾಸ್, ದೀರಜ್ ಗೌಡ ಕೊಡ್ಯಾಡಿ, ಮೌರಿಸ್ ಮಸ್ಕರೇನಸ್, ಸಿರಿಲ್ ಮಸ್ಕರೇನಸ್, ಪ್ರಣಮ್ ಕೈಕಾರ, ದಯಾನಂದ ಶೆಟ್ಟಿ ಕೈಕಾರ, ಕಾಂಗ್ರೆಸ್ ಮುಖಂಡ ಶಿವಮ ಆಳ್ವ, ಜಿನ್ನಪ್ಪ ಪೂಜಾರಿ ಮುರ, ಪುತ್ತೂರು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು,ಶರತ್ ಕೇಪುಳು ಮತ್ತಿತರರು ಉಪಸ್ಥಿತರಿದ್ದರು.