ಕಡಬ : ರಿಕ್ಷಾಚಾಲಕನೋರ್ವ ಯುವತಿಯೊಬ್ಬಳೊಂದಿಗೆ ಬಲವಂತದಿಂದ ಲೈಂಗಿಕ ಸಂಪರ್ಕಗೊಳಿಸಿದರಿಂದ ಯುವತಿ ಈಗ 8 ತಿಂಗಳ ಗರ್ಭಿಣಿಯಾಗಿದ್ದು,ಯುವತಿ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿ ರಿಕ್ಷಾ ಚಾಲಕ ಯುವರಾಜ ಎಂಬಾತನು, ಪ್ರೌಢಶಾಲಾ ದಿನಗಳಲ್ಲಿ ಯುವತಿಯನ್ನು ಶಾಲೆಗೆ ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದು,ಬಳಿಕ 2019ರಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಯುವತಿಯೊಂದಿಗೆ ಬಲವಂತದಿಂದ ಲೈಂಗಿಕ ಸಂಪರ್ಕ ಮಾಡಿದ್ದು ಬಳಿಕ 2020ರ ಅಕ್ಟೋಬರ್ ತನಕ ಬಲವಂತದಿಂದ ಈ ಕೃತ್ಯ ನಡೆಸುತ್ತಿದ್ದ ಇದರ ಪರಿಣಾಮ ಯುವತಿ ಈಗ 8 ತಿಂಗಳ ಗರ್ಭವತಿಯಾಗಿದ್ದು,ಈ ವಿಚಾರದ ಕುರಿತು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಿಕ್ಷಾ ಚಾಲಕ ಯುವರಾಜನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.