ಉಪ್ಪಿನಂಗಡಿ: ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ಮಹಿಳೆಯೋರ್ವರು ಸಾವನ್ನಪ್ಪಿ ಎರಡು ಮೂರು ದಿನ ಕಳೆದರೂ ಯಾರ ಗಮನಕ್ಕೂ ಬಾರದೆ, ಜನಗಣತಿಯ ಮಂದಿ ಮನೆಗೆ ಭೇಟಿ ನೀಡಿದಾಗಲೇ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ವಿಳಂಬವಾಗಿ ಬೆಳಕಿಗೆ ಬಂದಿದೆ.
ಇಳಂತಿಲ ಗ್ರಾಮದ ನೇಜಿಕಾರ್ ಎಂಬಲ್ಲಿ ವಾಸವಾಗಿದ್ದ ಸುಂದರಿ (65 ವ.) ಮೃತಪಟ್ಟವರು. ಇವರು ಏ. 14ರಂದು ಸ್ಥಳೀಯರಿಗೆ ಕಾಣಿಸಿದ್ದರು. ಆ ಬಳಿಕ ಯಾರೂ ನೋಡಿರಲಿಲ್ಲ. ಏ. 18 ರಂದು ಅವರ ಮನೆಗೆ ಜನಗಣತಿಯ ಉದ್ದೇಶಕ್ಕೆಂದು ಸಿಬ್ಬಂದಿಯೋರ್ವರು ಭೇಟಿ ನೀಡಿದಾಗ ಮನೆಯ ಬಾಗಿಲುಗಳು ತೆರೆದುಕೊಂಡಿದ್ದು ಮನೆಯೊಳಗಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿ ಪೊಲೀಸರ ಗಮನಕ್ಕೆ ತರಲಾಗಿತ್ತು. ಆಗ ನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು.
ಪರವೂರಿನಲ್ಲಿದ್ದ ಅವರ ಮಗಳನ್ನು ಸಂಪರ್ಕಿಸಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ.


























