ವಿಟ್ಲ ಸಮೀಪದ ಕೆಲಿಂಜ ಪೆಲತ್ತಡ್ಕದಲ್ಲಿ ರಸ್ತೆಯಲ್ಲಿ ಹಾವು ಕಂಡು ಮುಂದಿನ ವಾಹನ ಅಕಸ್ಮಾತ್ ಬ್ರೇಕ್ ಹಾಕಿದ ಪರಿಣಾಮ ಆಟೋ ರಿಕ್ಷಾ ಹಾಗೂ ಆಕ್ಟಿವಾ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಬೋಳಂತೂರು ದಂಡೆಮಾರ್ ನಿವಾಸಿ ನಾಸೀರ್ (38) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಸ್ಥಳೀಯರು ಗಾಯಾಳುವನ್ನು ‘ವಿಟ್ಲ ಫ್ರೆಂಡ್ಸ್’ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ.


























