ಪುತ್ತೂರು: ನಾಥ ಪಂಥೀಯ ಜೋಗಿ ಸಮಾಜ ಸುಧಾರಕ ಸಂಘ, ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ 10ನೇ ವರ್ಷದ “ಆಟಿದ ಲೆಸ್‌ಡ್ ಕೆಸರ್ಡ್– ಒಂಜಿ ದಿನ ಕ್ರೀಡಾಕೂಟ” ಕಾರ್ಯಕ್ರಮವು ಜುಲೈ 19ರಂದು (ಭಾನುವಾರ) ಬೆಳಿಗ್ಗೆ 8.30 ಗಂಟೆಯಿಂದ ಕೂಡುರಸ್ತೆ ಮುಗೆರಡ್ಕದ ಗದ್ದೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಮಾಜದ ಸದಸ್ಯರ ಭಾಗವಹಿಸುವಿಕೆಯಿಂದ ದಿನವಿಡೀ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕ್ರೀಡಾಕೂಟಕ್ಕೆ ಅಗತ್ಯವಿರುವ ಗದ್ದೆಯ ಸಿದ್ಧತಾ ಕಾರ್ಯಗಳು ಸಂಪೂರ್ಣಗೊಂಡಿದ್ದು, ಸಂಘದ ಅಧ್ಯಕ್ಷರಾದ ದಯಾನಂದ ಜೋಗಿ (ಪುತ್ತೂರು ಮೂಲೆ), ಗೌರವಾಧ್ಯಕ್ಷರಾದ ಮೋನಪ್ಪ ಪುರುಷ (ಮುಗೆರಡ್ಕ) ಹಾಗೂ ಸಂಘದ ಸದಸ್ಯರು ಗದ್ದೆಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಅಗತ್ಯ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದು, ಅಂತಿಮ ಸಿದ್ಧತೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಸಮಾಜದ ಸದಸ್ಯರು, ಸಾರ್ವಜನಿಕರು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ವತಿಯಿಂದ ಮನವಿ ಮಾಡಲಾಗಿದೆ.


























