ವಿಟ್ಲ: ಇಲ್ಲಿನ ಪಿ.ಎಂ. ಶ್ರೀ ಪ್ರೌಢ ಶಾಲೆಯ ಸಹ ಶಿಕ್ಷಕಿ ಅನ್ನಪೂರ್ಣ ಅವರನ್ನು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ ಬಗ್ಗೆ ವರದಿಯಾಗಿದೆ.
ಅನ್ನಪೂರ್ಣ ಅವರ ವಿರುದ್ಧ ಇಲಾಖೆಯ ಹಿರಿಯ ಅಧಿಕಾರಿಗಳಿಗೆ, ವಿವಿಧ ದೂರುಗಳು ಬಂದ ಹಿನ್ನಲೆಯಲ್ಲಿ ಎಂಟು ವಿಷಯ ಉಲ್ಲೇಖಿಸಿ ಅಮಾನತು ಮಾಡಿದ್ದಾರೆ. ಶಿಕ್ಷಣ ಇಲಾಖೆಯ ಆಯುಕ್ತರಿಂದ ಹಾಗೂ ಕಾರ್ಯದರ್ಶಿಗಳಿಂದ ಪತ್ರಗಳು ಬಂದಿದ್ದು, ಈ ವಿಚಾರದಲ್ಲಿ ವಿಚಾರಣೆಗಳು ನಡೆದ ಬಳಿಕ ಈ ಆದೇಶವಾಗಿದೆ ಎಂದು ತಿಳಿದುಬಂದಿದೆ.



























