ಚಿಕ್ಕಮಗಳೂರು: ರೀಲ್ಸ್‌ಗಾಗಿ 3000 ಅಡಿ ಎತ್ತರದ ಬೆಟ್ಟದ ತುದಿಗೆ ಥಾರ್ ಕೊಂಡೋಯ್ದು ಪ್ರವಾಸಿಗರು ಹುಚ್ಚಾಟ ಮೆರೆದ ಘಟನೆ ಮೂಡಿಗೆರೆ ತಾಲೂಕಿನ ರಾಣಿಝರಿಯಲ್ಲಿ ನಡೆದಿದೆ. ಅಪಾಯಕಾರಿ ಸ್ಥಳಕ್ಕೆ ಕೊಂಡೊಯ್ದ ಥಾರ್ ವಾಹನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಬೆಂಗಳೂರು ಮೂಲದ ಪ್ರವಾಸಿಗರು ಥಾರ್ ಜೀಪ್‌ನಲ್ಲಿ ರಾಣಿಝರಿಗೆ ಭೇಟಿ ನೀಡಿದ್ದರು. ಈ ವೇಳೆ ರೀಲ್ಸ್‌ಗಾಗಿ ಅಪಾಯಕಾರಿ ಬೆಟ್ಟದ ತುದಿಗೆ ಥಾರ್‌ನ್ನು ಕೊಂಡೊಯ್ದಿದ್ದರು. ಅರಣ್ಯ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಅಧಿಕಾರಿಗಳು ಥಾರ್‌ನ್ನು ಸೀಜ್ ಮಾಡಿದ್ದಾರೆ.
ರೀಲ್ಸ್ ಗಾಗಿ ರಿಸ್ಕ್ ತೆಗೆದುಕೊಂಡ ಬೆಂಗಳೂರು ಪ್ರವಾಸಿಗರು ಈಗ ಅರಣ್ಯ ಇಲಾಖೆ ಅತಿಥಿಗಳಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.




























