ಕಡಬ: ಅ.3 ರಂದು ಸಂಜೆ ನೂಜಿಬಾಳ್ತಿಲ ಗ್ರಾಮದ ಕೈಪನಡ್ಕ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ನಡೆಸಿ, ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಇತ್ತಂಡದ ನಾಲ್ವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧರ್ಮಸ್ಥಳದಿಂದ ಕಾರಿನಲ್ಲಿ (ಎಪಿ 40, ಸಿಎನ್ 5633) ಬಂದಿದ್ದ ಆಂಧ್ರ ಪ್ರದೇಶ ಮೂಲದ ಯಾತ್ರಾರ್ಥಿಗಳು ನೂಜಿಬಾಳ್ತಿಲಗ್ರಾಮದಕೈಪನಡ್ಕದಲ್ಲಿ ರಸ್ತೆ ಬದಿಯಲ್ಲಿರುವ ಮೇಹಿ ಜಾರ್ಜ್ ಎಂಬವರ ತೋಟದಿಂದ ಅಡಿಕೆ ಹಾಗೂ ತೆಂಗಿನ ಗಿಡಗಳನ್ನು ತೆಗೆಯುತ್ತಿರುವುದನ್ನು ಮೇಹಿ ಜಾರ್ಜ್ ಮತ್ತು ಜಾನ್ಸನ್ ಎಂಬವರು ತಡೆದು ನಿಲ್ಲಿಸಿದ ವೇಳೆ ಇತ್ತಂಡದವರ ನಡುವೆ ಮಾತಿನ ಚಕಮಕಿ ಉಂಟಾಗಿದೆ.
ಅಲ್ಲದೇ ಇವರು ಧರ್ಮಸ್ಥಳ-ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಗಲಾಟೆ ಮಾಡಿಕೊಂಡು ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿರುವುದಾಗಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೇಹಿ ಜಾರ್ಜ್ (44), ಜಾನ್ಸನ್, ಆಂಧ್ರಪ್ರದೇಶದ ರಾಜಪಲ್ಲಿ ಹರ್ಷವರ್ಧನ (25) ಹಾಗೂ ಕೂಡೂರು ಯೋಗಾನಂದ ಅಲಿಯಾಸ್ ರಾಮಚಂದ್ರ (28) ವಿರುದ್ದ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ.117/2026ರಂತೆ ಭಾರತೀಯ ನ್ಯಾಯಸಂಹಿತೆ (BNS) ಕಲಂ 194 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 92ರಡಿ ಪ್ರಕರಣ ದಾಖಲಾಗಿದೆ.



























