ವಿಟ್ಲ, ಆ.25: ಮೂಲತಃ ವಿಟ್ಲ ಕೊಡಂಗಾಯಿ ನಿವಾಸಿ ಹಾಗೂ ಜಿಎಸ್‌ಬಿ ಸಮಾಜದ ಹಿರಿಯರಾದ ಅಮ್ಮೆಂಬಳ ಶ್ರೀನಿವಾಸ ಪೈ (78) ಅವರು ಬೆಂಗಳೂರಿನ ಸ್ವಗೃಹದಲ್ಲಿ ಆ.25ರಂದು ನಿಧನ ಹೊಂದಿದರು.ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಸುಮಾರು 40 ವರ್ಷಗಳ ಹಿಂದೆ ವಿಟ್ಲದ ಶಾಲಾ ರಸ್ತೆಯಲ್ಲಿ ‘ಬಾಂಬೇ ಹೊಟೇಲ್’ ನಡೆಸುತ್ತಿದ್ದ ಶ್ರೀನಿವಾಸ ಪೈ ಅವರು ಪ್ರಸಿದ್ಧ ಹೊಟೇಲ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ವಿಟ್ಲ ಶ್ರೀ ದೇವತಾ ಸಮಿತಿ ವತಿಯಿಂದ ನಡೆಯುತ್ತಿದ್ದ ಶಾರದೋತ್ಸವದ ಸಂದರ್ಭದಲ್ಲಿ ಯುವಕರಿಗೆ ಹುಲಿವೇಷ ಹಾಕಲು ಪ್ರೇರಣೆ ನೀಡುವುದರ ಜೊತೆಗೆ, ಅವರಿಗೆ ಧನ ಸಹಾಯವನ್ನೂ ಮಾಡುತ್ತಿದ್ದರು.
ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ವಿಟ್ಲದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದ ಹಿರಿಯರಲ್ಲಿ ಒಬ್ಬರಾಗಿದ್ದರು.





























