ಉಪ್ಪಿನಂಗಡಿ: ಟೀಮ್ ಅಘೋರ ಉಬಾರ್ (ರಿ.) ಪ್ರಸ್ತುತ ಪಡಿಸುವ ಶಾಸಕ ಅಶೋಕ್ ಕುಮಾರ್ ರೈ ಇವರ ಮಾರ್ಗದರ್ಶನದಲ್ಲಿ ಅಕ್ಟೋಬರ್ 17/18 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂಭಾಗ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಪ್ರಧಾನ ಅರ್ಚಕರಾದ ಹರೀಶ್ ಉಪಾಧ್ಯಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್, ಶ್ರೀ ಕೃಷ್ಣ ಗುರೂಜಿ, ಸದಸ್ಯರಾದ ದೇವದಾಸ್ ರೈ, ವೆಂಕಟೇಶ್ ಎಂ ರಾವ್, ದೇವಳದ ಸಿಬ್ಬಂದಿ ಬಿ ಗಿರೀಶ್, ಕಚೇರಿ ಸಿಬ್ಬಂದಿ ಕೃಷ್ಣಪ್ರಸಾದ್ ಪಾಡಿಲ ಮತ್ತು ಟೀಮ್ ಅಘೋರ ತಂಡದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮಗಳ ವಿವರ…!
ದಿನಾಂಕ 17 ಅಕ್ಟೋಬರ್ 2026
ಸಂಜೆ 6 ಕ್ಕೆ ಉದ್ಘಾಟನೆ
6 ರಿಂದ 9.30 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತಾರಾ ಮೆರುಗು
9.30 ಕ್ಕೆ ಊದು ಪೂಜೆ
18 ಅಕ್ಟೋಬರ್ 2026
ಬೆಳಗ್ಗೆ 8 ಗಂಟೆಗೆ ಜಂಡೆ ಮೆರವಣಿಗೆ



























