Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ವಿದ್ಯಾರ್ಥಿಗಳ ಜೊತೆ ಶಾಸಕ ಅಶೋಕ್ ರೈ ಸಂವಾದ : ಬೇಡಿಕೆ – ಸಮಸ್ಯೆಗಳ ಬಗ್ಗೆ ಚರ್ಚೆ..!

    ವಿದ್ಯಾರ್ಥಿಗಳ ಜೊತೆ ಶಾಸಕ ಅಶೋಕ್ ರೈ ಸಂವಾದ : ಬೇಡಿಕೆ – ಸಮಸ್ಯೆಗಳ ಬಗ್ಗೆ ಚರ್ಚೆ..!

    ಬೆಳ್ಳಾರೆ: ಮಸೀದಿಯಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ:; ಆಸ್ಪತ್ರೆಗೆ ದಾಖಲು

    ಮಂಗಳೂರು: ವಿದ್ಯಾರ್ಥಿಗೆ ಹಲ್ಲೆ ನಡೆಸಿ ಚೂರಿ ಇರಿತ: ಇಬ್ಬರು ವಶಕ್ಕೆ..!!

    ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!

    ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!

    ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!

    ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!

    ಮಂಗಳೂರು: ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ :₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ಕಳವು ಸೊತ್ತು ವಶ..!

    ಮಂಗಳೂರು: ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ :₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ಕಳವು ಸೊತ್ತು ವಶ..!

    ವಿಟ್ಲ: ಸ್ವಚ್ಛ ಭಾರತ್ ಮಿಷನ್‌ಗೆ ಉತ್ತೇಜನ:₹60.10 ಲಕ್ಷ ವೆಚ್ಚದ MRF ಘಟಕ ಉದ್ಘಾಟಿಸಿದ ಬ್ರಿಜೇಶ್ ಚೌಟ..!

    ವಿಟ್ಲ: ಸ್ವಚ್ಛ ಭಾರತ್ ಮಿಷನ್‌ಗೆ ಉತ್ತೇಜನ:₹60.10 ಲಕ್ಷ ವೆಚ್ಚದ MRF ಘಟಕ ಉದ್ಘಾಟಿಸಿದ ಬ್ರಿಜೇಶ್ ಚೌಟ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ವಿದ್ಯಾರ್ಥಿಗಳ ಜೊತೆ ಶಾಸಕ ಅಶೋಕ್ ರೈ ಸಂವಾದ : ಬೇಡಿಕೆ – ಸಮಸ್ಯೆಗಳ ಬಗ್ಗೆ ಚರ್ಚೆ..!

October 4, 2026
in ಪುತ್ತೂರು
0
ವಿದ್ಯಾರ್ಥಿಗಳ ಜೊತೆ ಶಾಸಕ ಅಶೋಕ್ ರೈ ಸಂವಾದ : ಬೇಡಿಕೆ – ಸಮಸ್ಯೆಗಳ ಬಗ್ಗೆ ಚರ್ಚೆ..!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿದೆ, ನೀವು ಶಿಕ್ಷಣ ಪಡೆದು ನಾಳೆಯ ಬದುಕಿಗೆ ಸುಂದರ ಹೆಜ್ಜೆ ಇಡುವ ಸಮಯ, ನೀವು ಏನಾಗಬೇಕೆಂದು ಬಯಸಿದ್ದೀರೋ ಅದನ್ನು ಸಾಧಿಸಿ ಸಫಲರಾಗುವ ಛಲ ನಿಮ್ಮಲ್ಲಿರಬೇಕು. ಶಿಕ್ಷಣವಂತರಾಗಿ ಸಾಧನೆ ಮಾಡುವ ಮೂಲಕ ಕಲಿತ ಸಂಸ್ಥೆಗೆ, ಊರಿಗೆ, ದೇಶಕ್ಕೆ ಕೀರ್ತಿ ತರುವ ಕೆಲಸವನ್ನು ಪ್ರತೀಯೊಬ್ಬರೂ ಮಾಡಬೇಕು, ನಿಮ್ಮ ಶಿಕ್ಷಣಕ್ಕೆ ಏನು ನೆರವು ಬೇಕೋ ಅದನ್ನು ನಾನು ಮಾಡುವೆ ಎಂದು ಶಾಸಕ ಅಶೋಕ್ ರೈ ಅವರು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.

Advertisement
Advertisement

ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ಸ.03 ರಂದು ಪುತ್ತೂರಿನ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ಜೊತೆ ಶಾಸಕರು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಶಾಸಕರು ವಿದ್ಯಾರ್ಥಿಗಳ ಜೊತೆ ಸುಮಾರು 2 ಗಂಟೆಗಳ ಕಾಲ ವಿವಿಧ ವಿಚಾರಗಳಿಗೆ ಸಂಬಂಧಿಸಿ ಸಂವಾದ, ಚರ್ಚೆ ನಡೆಸಿದರು.

Advertisement
Advertisement

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಾಸಕರು ವಿದ್ಯಾರ್ಥಿ ಜೀವನ ಎಂಬುದು ನಮ್ಮ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ. ನೀವು ಮುಂದೆ ಏನು ಆಗಬೇಕೆಂದು ಬಯಸಿದ್ದೀರೋ ಅದನ್ನು ಈಡೇರಿಸುವ ಸಮಯ ವಿದ್ಯಾರ್ಥಿ ಜೀವನ. ಎಲ್ಲಿ, ಏನೆಲ್ಲಾ ಕಲಿಯಲು ಅವಕಾಶವಿದೆಯೋ ಅದೆಲ್ಲವನ್ನೂ ಕಲಿತು ಜ್ಞಾನವನ್ನು ವೃದ್ದಿಸಿಕೊಳ್ಳಬೇಕು. ಕಲಿತ ವಿದ್ಯೆ ಎಂದೂ ವ್ಯರ್ಥವಾಗುವುದೇ ಇಲ್ಲ. ಕಲಿಕೆಯ ಜೊತೆ ಇತರೆ ಶೈಕ್ಷಣಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವು ಮ್ತತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮೂಲಕ ಜೀವನಕ್ಕೆ ಮುನ್ನುಡಿ ಬರೆಯವ ಛಲ ಎಲ್ಲರಲ್ಲೂ ಇರಬೇಕು ಎಂದು ಹೇಳಿದರು.

Advertisement

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣಕ್ಕೆ ಒತ್ತು ಕೊಡಿ : ವಿದ್ಯಾರ್ಥಿಗಳನ್ನು ರಾಜಕೀಯ ಶಕ್ತಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಇಂದಿನ ಕಾಲಘಟ್ಟದಲ್ಲಿ ನೀವು ಅತ್ಯಂತ ಎಚ್ಚರದಿಂದ ಇರಬೇಕು. ವಿದ್ಯಾರ್ಥಿಗಳು ವಿದ್ಯಾರ್ಥಿಗಳಾಗಿಯೇ ಇರಬೇಕು ವಿನಾ ನಿಮ್ಮ ಕಲಿಕೆಯ ಕಾಲದಲ್ಲಿ ರಾಜಕೀಯದವರ ಬಲಿಪಶುಗಳಾಗಬೇಡಿ. ನಿಮ್ಮ ತಂದೆ ತಾಯಿ ಕಷ್ಟದಿಂದ ಯಾವುದೋ ಉದ್ದೇಶ ಇಟ್ಟುಕೊಂಡು ನಿಮಗೆ ಶಿಕ್ಷಣ ನೀಡುತ್ತಿರಬಹುದು ಅವರ ನಿರೀಕ್ಷೆಯನ್ನು ಎಂದೂ ಮಣ್ಣು ಪಾಲುಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಶಾಸಕರು ಸಲಹೆ ನೀಡಿದರು.

ಎಲ್ಲದರಲ್ಲೂ ನಾವೇ ಫಸ್ಟ್ ಆದರೆ ಸರಕಾರಿ ಕೆಲಸದಲ್ಲಿ ಲಾಸ್ಟ್ : ಪ್ರತೀ ಬಾರಿ ಶೈಕ್ಷಣಿಕ ವರ್ಷದ ಪಲಿತಾಂಶ ಬಂದಾಗ ದ ಕ ಮತ್ತು ಉಡುಪಿ ಜಿಲ್ಲೆಯವರೇ ಪ್ರಥಮ ಸ್ಥಾನದಲ್ಲಿರುತ್ತಾರೆ, ರ‍್ಯಾಂಕ್ ಹೊಡೆಯುವುದರಲ್ಲೂ ನಾವೇ ಪ್ರಥಮದಲ್ಲಿರುತ್ತೇವೆ ಆದರೆ ಸರಕಾರಿ ಕೆಲಸ ಪಡೆಯುವುದರಲ್ಲಿ ನಾವು ಕೊನೇಯ ಸ್ಥಾನದಲ್ಲಿರುತ್ತೇವೆ. ನಾವು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸದೇ ಇರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಪ್ರತೀಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಭಾಗವಹಿಸಬೇಕು. ಸೋಲುತ್ತದೋ, ಗೆಲ್ಲುತ್ತದೋ ಎಂಬುದರ ಬಗ್ಗೆ ನೀವು ಚಿಂತೆ ಮಾಡಬೇಡಿ. ಸೋಲೇ ಜೀವನದ ಗೆಲುವಿನ ಹಾದಿ ಎಂಬುದನ್ನೂ ಯಾರೂ ಮರೆಯಬಾರದು ಎಂದು ಶಾಸಕರು ಹೇಳಿದರು.

ಸಮಸ್ಯೆಗಳನ್ನು ಶಾಸಕರ ಮುಂದಿಟ್ಟ ವಿದ್ಯಾರ್ಥಿಗಳು : ಬೊಳುವಾರಿನಲ್ಲಿರುವ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಕೆಲವೊಂದು ಸಮಸ್ಯೆಗಳನ್ನು, ಬೇಡಿಕೆಗಳನ್ನು ಈ ಸಂದರ್ಭದಲ್ಲಿ ಶಾಸಕರ ಮುಂದಿಟ್ಟರು. ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿರುವ ಕಾರಣ ಕಾಲೇಜಿನ ಆವರಣದಲ್ಲೇ ಕ್ಯಾಂಟೀನ್ ವ್ಯವಸ್ಥೆ ಮಾಡಬೇಕು ಮತ್ತು ಈ ಕ್ಯಾಂಟೀನ್‌ನಲ್ಲಿ ಕೈಗೆಟಕುವ ಧರದಲ್ಲಿ ವಿದ್ಯಾರ್ಥಿಗಳಿಗೆ ಉಪಹಾರ, ಊಟದ ವ್ಯವಸ್ಥೆಯನ್ನು ಮಾಡಬೇಕು. ನಾವು ವಿದ್ಯಾರ್ಥಿನಿಯರಾದ ಕಾರಣ ನಮಗೆ ಹೊರಗೆ ಹೋಗಿ ಹೊಟೇಲ್‌ಗಳಲ್ಲಿ ಊಟ ಮಾಡುವುದು ಅಷ್ಟು ಸರಿಯಾಗುವುದಿಲ್ಲ ಈ ಕಾರಣಕ್ಕೆ ಕ್ಯಾಂಟೀನ್ ವ್ಯವಸ್ಥೆ ಮಾಡಿ ಎಂದು ಬೇಡಿಕೆ ಇಟ್ಟಾಗ ಶಾಸಕರು ಅದಕ್ಕೆ ಒಪ್ಪಿಗೆ ಸೂಚಿಸಿದರು. ಕಾಲೇಜಿನ ಕಂಪ್ಯೂಟರ್ ಸಂಖ್ಯೆ ಕೇವಲ ನಾಲ್ಕು ಇದೆ ಅದನ್ನು ಹತ್ತಕ್ಕೆ ಏರಿಸಿ ಎಂದು ವಿದ್ಯಾರ್ಥಿಗಳ ಮನವಿಗೆ ಶಾಸಕರು ಸ್ಪಂದಿಸಿದರು. ಕಾಲೇಜಿಗೆ ಬರಲು ಸಿಟಿ ಬಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದು ಅದಕ್ಕೂ ಶಾಸಕರು ಸ್ಪಂದನೆ ನೀಡಿದರು.

ಉಳಿದಂತೆ ವಿವಿಧ ಗ್ರಾಮಾಂತರ ಭಾಗದಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಇದ್ದು ಅದನ್ನು ಶಾಸಕರ ಗಮನಕ್ಕೆ ತಂದರು. ಈಗ ಇರುವ ರೂಟ್‌ಗಳಲ್ಲಿ ಬಸ್‌ನ ಕೊರತೆ ಅಥವಾ ಸಮಯ ವೆತ್ಯಾಸ ಮಾಡಬೇಕಿದ್ದರೆ ಅದನ್ನು ಮಾಡಬಹುದು ಎಂದು ಶಾಸಕರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಶಾಸಕರ ಸಂವಾದ ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮವಾಗಿದೆ, ನಮ್ಮ ಸಮಸ್ಯೆಗಳನ್ನು ಅವರ ಬಳಿ ಹೇಳಿಕೊಂಡೆವು. ಸಂವಾದದಲ್ಲಿ ಉತ್ತಮ ಮಾಹಿತಿಯೂ ದೊರೆತಿದೆ, ಶಾಸಕರ ಮಾತುಗಳು ನಮಗೆ ಭರವಸೆಗಳನ್ನು ಮೂಡಿಸಿದೆ. ಇಂಥಹ ಕಾರ್ಯಕ್ರಮಗಳು ಇನ್ನೂ ನಡೆಯಬೇಕು. ಅವರಾಗಿಯೇ ನಮ್ಮನ್ನು ಕರೆದು ಈ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದಾರೆ. – ಗೌತಮಿ , ವಿದ್ಯಾರ್ಥಿನಿ

ಶಾಸಕರು ನಮ್ಮೊಂದಿಗೆ ಚೆನ್ನಾಗಿ ಮಾತನಾಡಿದ್ರು, ಸಮಸ್ಯೆಗಳನ್ನು ಹೇಳಿದ್ದೇವೆ ಅವರು ಆಲಿಸಿದ್ದಾರೆ, ಸಮಸ್ಯೆಗೆ ಪರಿಹಾರ ಕೊಟ್ಟಿದ್ದಾರೆ. ಶಾಸಕರಲ್ಲಿ ಮುಕ್ತವಾಗಿ ಮಾತನಾಡಲು ಅವಕಾಶ ಸಿಕ್ಕಿದೆ. ಶಾಸಕರಿಗೆ ದನ್ಯವಾದಗಳು – ಅಂಕಿತಾ, ವಿದ್ಯಾರ್ಥಿ

ಬೇರೆ ಯಾರೂ ಈ ರೀತಿಯ ಕಾರ್ಯಕ್ರಮ ಮಾಡುವುದಿಲ್ಲ. ನಮಗೆ ಉತ್ತಮ ಮಾರ್ಗದರ್ಶನ ತರಗತಿ ಜೊತೆಗೆ ನಾವು ಜೀವನದಲ್ಲಿ ಮುಂದೆ ಏನು ಮಾಡಬೇಕು, ಹೇಗೆ ವ್ಯಾಸಂಗ ಮಾಡಬೇಕು ಎಂಬುದನ್ನು ಚೆನ್ನಾಗಿ ಮನಮುಟ್ಟುವಂತೆ ನಮಗೆ ವಿವರಿಸಿದ್ದಾರೆ. ಇಂಥಹ ಕಾರ್ಯಕ್ರಮ ಮುಂಧೆಯೂ ನಡೆಯಬೇಕು. ವಿದ್ಯಾರ್ಥಿಗಳ ಸಮಸ್ಯೆ, ಬೇಡಿಕೆಗಳನ್ನು ಆಲಿಸಿದ ಶಾಸಕರಿಗೆ ಅಭಿನಂದನೆಗಳು – ಅಸ್ಮಾವಿದ್ಯಾರ್ಥಿನಿ

ಶಾಸಕರು ತಮ್ಮ ಮೌಲ್ಯಯುತ ಸಮಯವನ್ನು ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿದ್ದಾರೆ.ನಮ್ಮ ಕಷ್ಟಗಳನ್ನು ಆಲಿಸಿ ಅದಕ್ಕೆ ಪರಿಹಾರ ಒದಗಿಸಿದ್ದಾರೆ.- ಶಿವಾನಿ ವಿದ್ಯಾರ್ಥಿ

ನನ್ನ ವಿಧಾನ ಸಭಾ ಕ್ಷೇತ್ರದ ಕಾಲೇಜು ವಿದ್ಯಾರ್ಥಿಗಳ ಜೊತೆ ಒಂದು ದಿನ ಬೆರೆತು ಅವರ ಬೇಡಿಕೆ, ಸಮಸ್ಯೆಗಳನ್ನು ಆಲಿಸುವ ಒಂದು ಹೊಸ ಪ್ರಯೋಗವನ್ನು ಆರಂಭಿಸಿದ್ದೇನೆ. ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಜೊತೆ ಈ ಸಂವಾದ ನಡೆಯಲಿದೆ. ಪ್ರಾರಂಭದಲ್ಲಿ ಪುತ್ತೂರಿನ ಪ್ರಥಮ ದರ್ಜೆ ಸರಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿಗಳನ್ನು ಬೇಟಿಯಾಗಿದ್ದೇನೆ. ಅವರ ಜೊತೆ ಮುಕ್ತವಾಗಿ ಮಾತನಾಡಿದ್ದೇನೆ. ಸಂಪನ್ಮೂಲ ವ್ಯಕ್ತಿಗಳಿಂದ ಅವರಿಗೆ ತರಬೇತಿಯನ್ನು ನೀಡಿದ್ದೇನೆ. ಯುವ ವಿದ್ಯಾರ್ಥಿ ಸಮೂಹದ ಶಿಕ್ಷಣ ಅಥವಾ ಕಲಿಕೆಗೆ ಯಾವುದೇ ತೊಂದರೆಗಳಿದ್ದಲ್ಲಿ ಅದನ್ನು ಪರಿಹರಿಸಿ ಮತ್ತು ಅವರ ಸಮಸ್ಯೆಗಳನ್ನು ಆಲಿಸುವ ಉದ್ದೇಶ ಇದರ ಹಿಂದಿದೆ. ಬಹುತೇಕ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ – ಅಶೋಕ್ ರೈ, ಶಾಸಕರು, ಪುತ್ತೂರು

ವಿದ್ಯಾರ್ಥಿಗಳ ಜೊತೆ ಊಟ : ಕಾರ್ಯಕ್ರಮದ ಕೊನೇಯಲ್ಲಿ ವಿದ್ಯಾರ್ಥಿಗಳ ಜೊತೆ ಶಾಸಕರು ಊಟವನ್ನು ಮಾಡಿದರು. ತಾನು ಮನೆಯಿಂದ ತಂದಿದ್ದ ಮೀನ್ ಫ್ರೈಯನ್ನು ವಿದ್ಯಾರ್ಥಿಗಳಿಗೆ ಹಂಚಿದರು. ಶಾಸಕರ ಪತ್ನಿ ಸುಮಾ ಅಶೋಕ್ ರೈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು. ರೈ ಚಾರಿಟೇಬಲ್ ಟ್ರಸ್ಟ್ ಕಾಯಾಧ್ಯಕ್ಷ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ಸತೀಶ್ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.

Previous Post

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆ ನಡೆಸಿ ಚೂರಿ ಇರಿತ: ಇಬ್ಬರು ವಶಕ್ಕೆ..!!

Next Post

ಪೇಟ್ರಿಯಾರ್ಕಿ ವಿರುದ್ಧ ‘ಪಿಂಕ್’ ಕ್ರಾಂತಿ: ಬೆಂಗಳೂರಿನಲ್ಲಿ ಮಧ್ಯರಾತ್ರಿಯಲ್ಲಿ ಬೀದಿಗಿಳಿದು ಧ್ವನಿ ಎತ್ತಿದ ಮಹಿಳೆಯರು.!

OtherNews

ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!
Featured

ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!

October 3, 2026
ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!
ಕ್ರೈಮ್

ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!

October 3, 2026
ವಿಟ್ಲ: ಸ್ವಚ್ಛ ಭಾರತ್ ಮಿಷನ್‌ಗೆ ಉತ್ತೇಜನ:₹60.10 ಲಕ್ಷ ವೆಚ್ಚದ MRF ಘಟಕ ಉದ್ಘಾಟಿಸಿದ ಬ್ರಿಜೇಶ್ ಚೌಟ..!
Featured

ವಿಟ್ಲ: ಸ್ವಚ್ಛ ಭಾರತ್ ಮಿಷನ್‌ಗೆ ಉತ್ತೇಜನ:₹60.10 ಲಕ್ಷ ವೆಚ್ಚದ MRF ಘಟಕ ಉದ್ಘಾಟಿಸಿದ ಬ್ರಿಜೇಶ್ ಚೌಟ..!

October 3, 2026
ಅನಾರೋಗ್ಯ ಪೀಡಿತರಿಗೆ ಅರುಣ ಸಾರಥಿ ಆಟೋ ಚಾಲಕರ ಸಂಘದಿಂದ ಧನಸಹಾಯ..!
ಪುತ್ತೂರು

ಅನಾರೋಗ್ಯ ಪೀಡಿತರಿಗೆ ಅರುಣ ಸಾರಥಿ ಆಟೋ ಚಾಲಕರ ಸಂಘದಿಂದ ಧನಸಹಾಯ..!

October 3, 2026
ವೀರಮಂಗಲ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ:; ಎಂಟು ಕೋಳಿ ವಶ
Featured

ವಿಟ್ಲದಲ್ಲಿ ಹಣ ಪಣಕ್ಕಿಟ್ಟು ಕೋಳಿ ಅಂಕ: ನಾಲ್ವರು ವಶಕ್ಕೆ..!!

October 3, 2026
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ : ವಿಚಾರಣೆ ನಡೆಸಿ ಡಿಎಚ್‌ಒಗೆ ವರದಿ-ವೈದ್ಯಾಧಿಕಾರಿ..!
ಕ್ರೈಮ್

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ : ವಿಚಾರಣೆ ನಡೆಸಿ ಡಿಎಚ್‌ಒಗೆ ವರದಿ-ವೈದ್ಯಾಧಿಕಾರಿ..!

October 1, 2026

Leave a Reply Cancel reply

Your email address will not be published. Required fields are marked *

Recent News

ಪೇಟ್ರಿಯಾರ್ಕಿ ವಿರುದ್ಧ ‘ಪಿಂಕ್’ ಕ್ರಾಂತಿ: ಬೆಂಗಳೂರಿನಲ್ಲಿ ಮಧ್ಯರಾತ್ರಿಯಲ್ಲಿ ಬೀದಿಗಿಳಿದು ಧ್ವನಿ ಎತ್ತಿದ ಮಹಿಳೆಯರು.!

ಪೇಟ್ರಿಯಾರ್ಕಿ ವಿರುದ್ಧ ‘ಪಿಂಕ್’ ಕ್ರಾಂತಿ: ಬೆಂಗಳೂರಿನಲ್ಲಿ ಮಧ್ಯರಾತ್ರಿಯಲ್ಲಿ ಬೀದಿಗಿಳಿದು ಧ್ವನಿ ಎತ್ತಿದ ಮಹಿಳೆಯರು.!

October 4, 2026
ವಿದ್ಯಾರ್ಥಿಗಳ ಜೊತೆ ಶಾಸಕ ಅಶೋಕ್ ರೈ ಸಂವಾದ : ಬೇಡಿಕೆ – ಸಮಸ್ಯೆಗಳ ಬಗ್ಗೆ ಚರ್ಚೆ..!

ವಿದ್ಯಾರ್ಥಿಗಳ ಜೊತೆ ಶಾಸಕ ಅಶೋಕ್ ರೈ ಸಂವಾದ : ಬೇಡಿಕೆ – ಸಮಸ್ಯೆಗಳ ಬಗ್ಗೆ ಚರ್ಚೆ..!

October 4, 2026
ಬೆಳ್ಳಾರೆ: ಮಸೀದಿಯಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ:; ಆಸ್ಪತ್ರೆಗೆ ದಾಖಲು

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆ ನಡೆಸಿ ಚೂರಿ ಇರಿತ: ಇಬ್ಬರು ವಶಕ್ಕೆ..!!

October 4, 2026
ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!

ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!

October 3, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.