ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ದರ್ಖಾಸು ಅನಂತಿಮಾರು ನಿವಾಸಿ ರಾಜೀವ ಪೂಜಾರಿ(55ವ)ರವರು
ಅಸೌಖ್ಯದಿಂದ ಜು.11ರಂದು ನಿಧನರಾದರು.
ಮೃತರು ಪತ್ನಿ ವಿಶಾಲಾಕ್ಷಿ, ಸಹೋದರರಾದ ತಿಮ್ಮಪ್ಪ ಪೂಜಾರಿ, ಅಣ್ಣಿಪೂಜಾರಿ, ಸಹೋದರಿಯರು ಮತ್ತು
ಬಾವಂದಿರನ್ನು ಅಗಲಿದ್ದಾರೆ.
ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯ ರಮೇಶ ಗೌಡ, ಸದಸ್ಯರಾದ ಯಂ. ತಿಮ್ಮಪ್ಪ ಪೂಜಾರಿ, ರಾಘವೇಂದ್ರ ಗೌಡ ಅಂದ್ರಟ ಮತ್ತಿತರರು ಮೃತರ ಮನೆಗೆ ಭೇಟಿ ಸಾಂತ್ವನ ಹೇಳಿದರು.