ಪುತ್ತೂರು: ಐತಿಹಾಸಿಕ ಹಿನ್ನೆಲೆಯ ಗಾಂಧಿಕಟ್ಟೆಯ ಪ್ರತಿಮೆಗೆ ಪದೇ ಪದೇ ಕಿಡಿಗೇಡಿಗಳಿಂದ ಅವಮಾನವಾಗುತ್ತಿರುವ ಹಿನ್ನೆಲೆಯಲ್ಲಿ ಗಾಂಧಿಕಟ್ಟೆ ಸಂಚಾಲಕರಾದ ಕೃಷ್ಣಪ್ರಸಾದ್ ಆಳ್ವ ರವರು ಪುತ್ತೂರಿನ ಸಹಾಯಕ ಕಮೀಷನರ್ ರವರಿಗೆ ಅನುದಾನದ ಮೂಲಕ ಬುಲೆಟ್ ಪ್ರೋಪ್ ಗ್ಲಾಸ್ ಅಳವಡಿಸಲು ಮನವಿ ಸಲ್ಲಿಸಿದರು.
1934 ರಲ್ಲಿ ಸ್ವಾತಂತ್ರ ಪೂರ್ವ ಅಭಿಯಾನದಲ್ಲಿ ಮಹಾತ್ಮಗಾಂಧಿಯವರು ಬಂದು ಕುಳಿತುಕೊಂಡ ಐತಿಹಾಸಿಕ ಗಾಂಧಿ ಕಟ್ಟೆಯನ್ನು ಕಳೆದ ಬಾರಿ ನವೀಕರಿಸಲಾಗಿದ್ದರು,
ಸರಿಯಾದ ಭದ್ರತೆ ಇಲ್ಲದ ಕಾರಣ ಪದೇ ಪದೇ ಪ್ರತಿಮೆಗೆ ಕಿಡಿಗೇಡಿಗಳಿಂದ ಅವಮಾನವಾಗುತ್ತಿದೆ. ಆದ್ದರಿಂದ ತಮ್ಮ ವತಿಯಿಂದ ವಿಶೇಷ ಅನುದಾನದಲ್ಲಿ ಬುಲೆಟ್ ಪ್ರೋಪ್ ಗ್ಲಾಸ್ ಅಳವಡಿಸಿ ಪ್ರತಿಮೆ ಸುತ್ತಲೂ ಭದ್ರತೆ ಕಾಪಾಡಬೇಕಾಗಿ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗಾಂಧಿಕಟ್ಟೆ ಸಮಿತಿ ಸದಸ್ಯರಾದ ಕೆ. ಹೆಚ್ ದಾಸಪ್ಪ ರೈ, ಸೀತಾರಾಮ ರೈ,ಸೈಯದ್ ಕಮಾಲ್, ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.