ಪುತ್ತೂರು: ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯನ್ನು ಎದುರು ನೋಡುತ್ತಿರುವ ಹತ್ತನೇ ತರಗತಿಯ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು, ಪರೀಕ್ಷೆ ಬರೆಯಲಿರುವ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಜುಲೈ 13 ಕ್ಕೆ ಮಾದರಿ ಪರೀಕ್ಷೆಯೊಂದನ್ನು ಆಯೋಜಿಸಲಾಗಿದೆ.
ಕೋವಿಡ್ -19 ಲಾಕ್ ಡೌನ್ ಕಾರಣದಿಂದಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮುಂದೂಡಲ್ಪಟ್ಟು ಇದೀಗ ಜುಲೈ ತಿಂಗಳ 19 ಮತ್ತು 22 ರಂದು ಹೊಸ ಮಾದರಿಯಲ್ಲಿ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳ ಮಟ್ಟಿಗೆ ನೂತನ ವಿಧಾನವಾದ ಬಹು ಆಯ್ಕೆಯ ಪರೀಕ್ಷಾ ಮಾದರಿ ಅಂಜಿಕೆ ಹುಟ್ಟಿಸದೇ ಆತ್ಮವಿಶ್ವಾಸದಿಂದ ಮಕ್ಕಳು ಪರೀಕ್ಷೆ ಬರೆಯುವಂತಾಗಲಿ ಎಂಬ ಉದ್ದೇಶದಿಂದ ಈ ಬಹು ಆಯ್ಕೆಯ ಮಾದರಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಹೇಳಿದ್ದಾರೆ.
ಆನ್ ಲೈನ್ ವೇದಿಕೆ ಗೂಗಲ್ ಫಾರ್ಮ್ ಮೂಲಕ ನಡೆಯುವ ಈ ಪರೀಕ್ಷೆಯಲ್ಲಿ 40 ವಿಜ್ಞಾನ ಮತ್ತು 40 ಗಣಿತ ವಿಷಯಗಳ ಕುರಿತು ಪ್ರಶ್ನೆಗಳನ್ನು ನೀಡಲಾಗುತ್ತದೆ. ಈ ಪರೀಕ್ಷೆಗೆ ಸೇರಿಕೊಳ್ಳಲು ವಿದ್ಯಾರ್ಥಿಗಳು ಇಚ್ಚಿಸಿದಲ್ಲಿ ಈ ದೂರವಾಣಿ ಸಂಖ್ಯೆ [ಹರೀಶ ಶಾಸ್ತ್ರೀ(9480198001), ನಳಿನ ಕುಮಾರೀ(9945991690), ಹರ್ಷಿತಾ ಪಿ(9880265305), ಚಿನ್ಮಯಿಮಯ್ಯ(9945723702),ಕವಿತಾ(9008517839),ಸುಪ್ರೀತ್(9731640407) ಅಥವಾ ಅಜಯ್ ಶಾಸ್ತ್ರೀ(9902194905)] ಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.