ಬೆಳ್ತಂಗಡಿ : ಎಸ್.ಕೆ.ಎಸ್.ಎಸ್. ಎಫ್ ಮಡಂತ್ಯಾರ್ ಕ್ಲಸ್ಟರ್ ವಿಖಾಯ ವತಿಯಿಂದ ಮಡಂತ್ಯಾರ್ ಕ್ಲಸ್ಟರ್ ವ್ಯಾಪ್ತಿಯಲ್ಲಿ ಸ್ವಚ್ಛತೆ, ಫಾಗಿಂಗ್ (ಹೊಗೆ ಸಿಂಪಡಣೆ) ಮತ್ತು ಸ್ಯಾನಿಟೈಸರಿಂಗ್ ಕಾರ್ಯಕ್ರಮ ನಡೆಯಿತು. ಎಸ್.ಕೆ.ಎಸ್.ಎಸ್.ಎಫ್ ಮಡಂತ್ಯಾರ್ ಕ್ಲಸ್ಟರ್ ಅಧ್ಯಕ್ಷರಾದ ಹಾಶಿಂ ಫೈಝಿ ಪಾಂಡವರಕಲ್ಲು ದು:ಅ ನಿರ್ವಹಿಸಿದರು, ದೂಮಳಿಕೆ ಖತೀಬರಾದ ಅದಂ ಮುಸ್ಲಿಯಾರ್ ವಿಷಯ ಮಂಡಿಸಿದರು.
ಎಸ್.ಕೆ.ಎಸ್.ಎಸ್.ಎಫ್ ಬೆಳ್ತಂಗಡಿ ವಲಯ ಕೋಶಾಧಿಕಾರಿ ಹಕೀಂ ಬಂಗೇರಕಟ್ಟೆ, ಮಡಂತ್ಯಾರ್ ಕ್ಲಸ್ಟರ್ ಉಪಾಧ್ಯಕ್ಷ ಅಬೂಸ್ವಲಿಹ್ ದೂಮಳಿಕೆ, ಕ್ಲಸ್ಟರ್ ಕಾರ್ಯದರ್ಶಿ ಶರೀಫ್ ಬಂಗೇರಕಟ್ಟೆ, ಕೋಶಾಧಿಕಾರಿ ಅಬ್ದುಲ್ ರಹ್ಮಾನ್ ಬಂಗೇರಕಟ್ಟೆ, ವರ್ಕಿಂಗ್ ಕಾರ್ಯದರ್ಶಿ ರಹ್ಮಾನ್ ಪುಂಜಾಲಕಟ್ಟೆ, ಕ್ಲಸ್ಟರ್ ವಿಖಾಯ ಉಸ್ತುವಾರಿ ಬಶೀರ್ ಬಳ್ಳಮಂಜ, ಎಸ್.ಕೆ.ಎಸ್.ಎಸ್.ಎಫ್ ಬೆಳ್ತಂಗಡಿ ವಲಯ ವರ್ಕಿಂಗ್ ಕಾರ್ಯದರ್ಶಿ ಕೌಸರ್ ಪುಂಜಾಲಕಟ್ಟೆ, ಎಸ್.ಕೆ.ಎಸ್.ಎಸ್.ಎಫ್ ಮಡಂತ್ಯಾರ್ ಕ್ಲಸ್ಟರ್ ವ್ಯಾಪ್ತಿಯ ಪುಂಜಾಲಕಟ್ಟೆ, ಪಾಂಡವರಕಲ್ಲು, ಬಂಗೇರಕಟ್ಟೆ, ದೂಮಳಿಕೆ, ನೆಲ್ಲಿಗುಡ್ಡೆ ಶಾಖೆಗಳ ವಿಖಾಯ ಸದಸ್ಯರು ಹಾಗೂ ಕ್ಲಸ್ಟರ್ ವ್ಯಾಪ್ತಿಯ ಹಿರಿಯರು ಭಾಗವಹಿಸಿದರು.
ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾ ಕೌನ್ಸಿಲರ್ ಶರೀಫ್ ದೂಮಳಿಕೆ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಣೆಗೈದರು. ಮಡಂತ್ಯಾರ್ ಪೇಟೆಯ ಪರಿಸರದಲ್ಲಿ ಸ್ಯಾನಿಟೈಸರಿಂಗ್ ಮತ್ತು ಫಾಗಿಂಗ್ ಮಾಡಲಾಯಿತು. ಹುಲ್ಲು, ಕಸ ಕಡ್ಡಿಗಳನ್ನು ತೆರವುಗೊಳಿಸುವ ಮೂಲಕ ಸ್ವಚ್ಛತೆ ಮಾಡಲಾಯಿತು.