ಉಡುಪಿ: ಬ್ರಹ್ಮಾವರದ ಅಪಾರ್ಟ್ಮೆಂಟ್ ಒಂದರಲ್ಲಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜುಲೈ 12ರಂದು ನಡೆದಿದೆ.
ಗಂಗೊಳ್ಳಿ ಮೂಲದ ವಿಶಾಲ ಗಾಣಿಗ(35) ಕೊಲೆಯಾದ ಮಹಿಳೆಯಾಗಿದ್ದಾರೆ. ಮಹಿಳೆಯ ಕುತ್ತಿಗೆಗೆ ವಯರ್ ಬಿಗಿದು ಕೊಲೆ ಮಾಡಲಾಗಿದೆ. ಕೊಲೆಯಾದ ಮಹಿಳೆ ಕೆಲವು ದಿನಗಳ ಹಿಂದೆಯಷ್ಟೆ ವಿದೇಶದಿಂದ ಆಗಮಿಸಿದ್ದರು. ತಮ್ಮ ತಂದೆಯ ಜೊತೆ ಗಂಗೊಳ್ಳಿಯ ಮನೆಗೆ ಹೋಗುವವರಿದ್ದರು. ದಾರಿ ಮದ್ಯೆ ಬ್ಯಾಂಕ್ ನ ಕೆಲಸ ಇರುವ ಕಾರಣ ಅದನ್ನು ಮುಗಿಸಿ ಗಂಗೊಳ್ಳಿ ಮನೆಗೆ ಬರುವೆ ಎಂದು ತಿಳಿಸಿದ್ದರು. ಆದರೆ, ಸಂಜೆಯಾದರೂ ಮನೆಗೆ ಬಾರದ ಕಾರಣ ಮಗಳನ್ನು ಹುಡುಕಿ ಬ್ರಹ್ಮಾವರಕ್ಕೆ ತಂದೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.
ಬ್ಯಾಂಕ್ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದಾಗ ಘಟನೆ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.