ಭಟ್ಕಳ: ತಾಲೂಕಿನ ಸಾಗರ ರಸ್ತೆಯ ಕೋಟಖಂಡ ಗುಡ್ಡೆ ಕಟ್ಟೆ ಸಮೀಪದಲ್ಲಿ ಮೇಯಲು ಬಿಟ್ಟ ದನವನ್ನು ಹತ್ಯೆಮಾಡಿ ಮಾಂಸವನ್ನು ಕತ್ತರಿಸುವ ವೇಳೆ ದನದ ಮಾಲೀಕನನ್ನು ಕಂಡು ಆರೋಪಿ ಪರಾರಿ ಆಗಿದ್ದ ಘಟನೆ ನಡೆದಿದೆ.
ತಾಲೂಕಿನ ಕೋಟಖಂಡ ನಿವಾಸಿಯಾದ ಆಕಳು ಮಾಲೀಕ ಬಡಿಯಾ ಸುಣ್ಣಗೊಂಡ ಬೆಳಿಗ್ಗೆ ಮೇಯಲು ಬಿಟ್ಟ ಆಕಳು ಸಂಜೆಯಾದರು ಮನೆಗೆ ಬರದ ಹಿನ್ನೆಲೆ ಸಾಗರ ರಸ್ತೆಯ ಗುಡ್ಡೆ ಕಟ್ಟೆಯ ಕಡೆಗೆ ಹುಡುಕಿಕೊಂಡು ಹೋಗಿದ್ದರು. ಈ ವೇಳೆ ಇಬ್ಬರು ಆರೋಪಿಗಳು ನಂಬರ್ ಪ್ಲೇಟ್ ಇಲ್ಲದ ಮೋಟಾರ್ ಸೈಕಲ್ ನಲ್ಲಿ ಬಂದಿದ್ದು, ಮಾಲೀಕನು ಸಾಕಿ ಸಲಹಿದ ಆಕಳನ್ನು ಸಾಯಿಸಿ ತಲೆ ಕತ್ತರಿಸಿ 4 ಕಾಲುಗಳನ್ನು ಬೇರ್ಪಡಿಸಿ ಚರ್ಮ ಸುಲಿದು ಮಾಂಸ ತೆಗೆಯುತ್ತಿರುವಾಗ ಆರೋಪಿಗಳು ಮಾಲೀಕನ್ನು ಕಂಡು ಪರಾರಿಯಾಗಿದ್ದಾರೆ ಎಂದು ಆಕಳು ಮಾಲೀಕ ತಿಳಿಸಿದ್ದಾರೆ.
ತಾಲೂಕಿನಾದ್ಯಂತ ಬಕ್ರೀದ್ ಹಬ್ಬದ ಹಿನ್ನೆಲೆ ಪೊಲೀಸರು ಚೆಕ್ ಪೋಸ್ಟ್ ಬಿಗಿಗೊಳಿಸಿರುವುದರಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಮೇಯಲು ಬಿಟ್ಟ ಆಕಳನ್ನು ಕಳುವು ಮಾಡಿ ಗೋಮಾಂಸ ಮಾಡಿಕೊಂಡು ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರುವ ಸಾಧ್ಯತೆ ಇರಬಹುದೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭಟ್ಕಳ ಸಿ.ಪಿ.ಐ, ದಿವಾಕರ್ ಗ್ರಾಮೀಣ ಪೊಲೀಸ್ ಠಾಣೆ ಪಿ.ಎಸ್.ಐ ಭರತ್,ನಗರ ಠಾಣೆಯ ಪಿ.ಎಸ್.ಈ ಸುಮಾ ಬಿ, ಹಾಗೂ ಹನುಮಂತಪ್ಪ ಕುಡಗುಂಟಿ ಹಾಗೂ ಸಿಬ್ಬಂದಿಗಳು ಮತ್ತು ಪಶು ಇಲಾಖೆ ಇಲಾಖೆಯ ಅಧಿಕಾರಿಯಾದ ವಿವೇಕಾನಂದ ಹೆಗ್ಡೆ ಹಾಗೂ ಸಿಬ್ಬಂದಿ ಭೇಟಿ ನೀಡಿ ಪಂಚನಾಮೆ ನಡೆಸಿ ಪೋಲಿಸರ ಮುಂದಾಳತ್ವದಲ್ಲಿ ವಿಧಿವಿಧಾನ ಮೂಲಕ ಆಕಳುವಿನ ಅಂತ್ಯ ಸಂಸ್ಕಾರ ನೆರವೇರಿಸಿದರು.