ಪುತ್ತೂರು: ನಗರ ಸಭೆಯಿಂದ ಬೀದಿ ಬದಿಯ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆಯನ್ನು ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನ ಸಭಾ ಕ್ಷೇತ್ರದ ವತಿಯಿಂದ ಖಂಡಿಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಬೆಳ್ಳಂಬೆಳಗ್ಗೆ ಹಲವು ಕಡೆ ಏಕಾಎಕಿ ಬೀದಿಬದಿ ವ್ಯಾಪಾರಸ್ಥರ ತುಂಡು ಜೋಪುಡಿಗಳಂತಹ ವ್ಯವಸ್ಥೆ ಗಳ ಮೇಲೆ ಅವರಿಗೆ ಲಿಖಿತವಾಗಿ ಯಾವುದೇ ಸೂಚನೆ ನೀಡದೆ ಅವುಗಳನ್ನು ಒಡೆದು ಉರುಳಿಸಿರುತ್ತೀರಿ. ಪ್ರಸ್ತುತ ಸನ್ನಿವೇಶದಲ್ಲಿ ಪ್ರಪಂಚವೇ ಕೋವಿಡ್ ಮಹಾಮಾರಿಯಿಂದ ತತ್ತರಿಸಿರುವ ಈ ಸಂದಿಗ್ದ ಪರಿಸ್ಥಿತಿ ಯಲ್ಲಿ ಜನರ ಹೊಟ್ಟೆ ಪಾಡಿಗೋಸ್ಕರ ನಗರ ಸಭೆ ವತಿಯಿಂದ ವಿಶೇಷ ಪ್ಯಾಕೇಜನ್ನು ಘೋಷಿಸಿಬೇಕಾಗಿದ್ದ ಸ್ಥಳೀಯಾಡಳಿತವು ಮಳೆಗಾಲವನ್ನೂ ಲೆಕ್ಕಿಸದೆ ಬಡವರ ಹೊಟ್ಟೆಗೆ ಬರೆಯನ್ನು ಎಳೆದಿರುವುದು ಅಮಾನವೀಯವಾಗಿದೆ. ನಗರ ಸಭೆಯ ಈ ಕ್ರಮವನ್ನು ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ಖಂಡಿಸುತ್ತದೆ. ಅವರಿಗೆ ಉಂಟಾದ ನಷ್ಟ ಮತ್ತು ಕಷ್ಟಕ್ಕೆ ನಗರ ಸಭೆ ಆಡಳಿತವೇ ನೇರ ಹೊಣೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಎಸ್.ಡಿ.ಪಿ.ಐ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಸಿದ್ಧೀಕ್ ಕೆ.ಎ., ಕಾರ್ಯದರ್ಶಿ ಅಶ್ರಫ್ ಬಾವು, ನಗರ ಘಟಕದ ಅಧ್ಯಕ್ಷ ಯಾಹ್ಯಾ ಕೂರ್ನಡ್ಕ, ಕಾರ್ಯದರ್ಶಿ ಜುನೈದ್ ಸಾಲ್ಮರ, ಎಸ್.ಡಿ.ಟಿ.ಯು ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ಎಸ್.ಡಿ.ಟಿ.ಯು ಆಟೋ ಯೂನಿಯನ್ ಅಧ್ಯಕ್ಷ ಶಮೀರ್ ನಾಜುಕ್, ಪಿ.ಎಫ್.ಐ ನಗರ ಘಟಕದ ಅಧ್ಯಕ್ಷ ಉಮ್ಮರ್ ಕೂರ್ನಡ್ಕ, ಸಾಲ್ಮರ ವಾರ್ಡ್ ಅಧ್ಯಕ್ಷ ನವಾಝ್ ಕೆರೆಮೂಲೆ, ಕಾರ್ಯದರ್ಶಿ ಹ್ಯಾರೀಸ್ ಕೂರ್ನಡ್ಕ ಉಪಸ್ಥಿತರಿದ್ದರು.