ಸ್ವಾತಂತ್ರ್ಯ ದಿನಾಚರಣೆ ಇನ್ನೇನು ಕೆಲವೇ ದಿನಗಳು ಉಳಿದಿದ್ದು, ಅಂದಿನ ಭಾಷಣಕ್ಕೆ ದೇಶದ ಜನರು ತಮ್ಮ ಸಲಹೆಗಳನ್ನು ನೀಡುವಂತೆ ಪ್ರಧಾನಿ ಮೋದಿ ಜನರಿಗೆ ಕರೆ ನೀಡಿದ್ದಾರೆ.
ಈ ಬಗ್ಗೆ ಪ್ರಧಾನಿ ಮೋದಿ ಕಚೇರಿ ಟ್ವೀಟ್ ಮಾಡಿದ್ದು, ನಿಮ್ಮ ಆಲೋಚನೆಗಳು ಹಾಗೂ ಕಲ್ಪನೆಗಳು ಪ್ರಧಾನಿ ಮೋದಿಯವರ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿರಲಿದೆ. ಇದಕ್ಕೆ ನಿಮ್ಮ ಸಲಹೆಯಯನ್ನು ನೀಡಿ. ನಿಮ್ಮ ಸಲಹೆ ಹಾಗೂ ವಿಚಾರಗಳನ್ನು mygov.in ನಲ್ಲಿ ಹಂಚಿಕೊಳ್ಳುವಂತೆ ತಿಳಿಸಿದೆ.
ಪ್ರತಿ ವರ್ಷ ಆಗಸ್ಟ್ 15ರಂದು ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ಮಾತನಾಡುತ್ತಾರೆ. ಕಳೆದ ಹಲವು ವರ್ಷಗಳಿಂದ ಪ್ರಧಾನಿ ಮೋದಿಯವರ ಭಾಷಣಗಳು ನಾಗರೀಕರ ಸಲಹೆ ಹಾಗೂ ಆಲೋಚನೆಗಳನ್ನು ಆಹ್ವಾನಿಸುತ್ತಾರೆ.