ಪುತ್ತೂರು: ಪಾಣಾಜೆ ವಲಯ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯು ವಲಯ ಅಧ್ಯಕ್ಷರಾದ ಬಾಬು ರೈ ಕೋಟೆಯವರ ಅಧ್ಯಕ್ಷತೆಯಲ್ಲಿ ನಡೆಯಿತು, ಈ ಸಭೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಹಾಗೂ ಪಾಣಾಜೆಯಲ್ಲಿ ವ್ಯಾಕ್ಸಿನ್ ಕೊಡುವಲ್ಲಿ ತಾರತಮ್ಯ ಎಸಗುತ್ತಿದ್ದಾರೆ ಎನ್ನುವ ಬಗ್ಗೆ ಚರ್ಚಿಸಲಾಯಿತು, ಸಭೆಯಲ್ಲಿ ದ ಕ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ನೇಮಕ ಗೊಂಡಿರುವ ಮಹಮ್ಮದ್ ಬಡಗನ್ನೂರು ಮತ್ತು ಜಿಲ್ಲಾಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಯಾಗಿರುವ ಪಂಚಾಯತ್ ಸದಸ್ಯ ನಾರಾಯಣ ನಾಯಕ್ ರವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೋನ್ ಸಿಕ್ವೆರಾ, ಬ್ಲಾಕ್ ಕೋವಿಡ್ ಸೇವಕ್ ಸಿಮ್ರಾನ್ ನಝೀರ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ, ಬ್ಲಾಕ್ ಕಾರ್ಯದರ್ಶಿ ಕೆ ಎ ಅಲಿ, ಉಮ್ಮರ್ ಜನಪ್ರಿಯ, ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ನಾಯಕ್, ಕೃಷ್ಣಪ್ಪ ಪೂಜಾರಿ, ಶ್ರೀಮತಿ ಮೈಮೂನತುಲ್ ಮೆಹ್ರ, ಶ್ರೀಮತಿ ವಿಮಲಾ, ವಲಯ ಕಾರ್ಯದರ್ಶಿ ಶಾಹುಲ್ ಹಮೀದ್ ಜಾಲಗದ್ದೆ, ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೀತಾ ಉದಯ ಶಂಕರ್ ಭಟ್, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಜಗಮೋಹನ್ ರೈ, ಮಹಮ್ಮದ್ ಕುಞ ಕಂಜಿಲ್ ಕುಂಜ, ಅಬೂಬಕ್ಕರ್ ಶಾಫಿ ಕಂಜಿಲ್ ಕುಂಜ, ಭಾಸ್ಕರ್ ಶೆಟ್ಟಿ, ಅಬ್ದುಲ್ ರಹಿಮಾನ್ ಹಾಜಿ, ಬಾಬು ನಲಿಕೆ ಕೀಲಂಪಾಡಿ, ಶೀನ ಭರಣ್ಯ, ಶಾಫಿ ಕಾನಾ, ವಿಶ್ವನಾಥ್ ರೈ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.