ಕೊರೊನಾ ಕಾಟಕ್ಕೆ ಮದ್ಯ ಪ್ರಿಯರಿಗೆ ಕೊಂಚ ನಿರಾಸೆ ಆಗಿದೆ. ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಪ್ರದೇಶಗಳ ಮದ್ಯದಂಗಡಿ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕೇರಳದ ಹೆಚ್ಚಿನ ಸಾರ್ವಜನಿಕರು ಮದ್ಯ ಸೇವನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳ ಮದ್ಯದಂಗಡಿಗಳನ್ನೇ ಅವಲಂಬಿಸಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 34 ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 (3) ಹಾಗೂ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ಕಾಯ್ದೆ 1965 ನಿಯಮ 21(1) ಅಡಿಯಲ್ಲಿ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ತಾಲೂಕು ಪ್ರದೇಶಗಳ 5 ಕಿ.ಮೀ, ವ್ಯಾಪ್ತಿಯಲ್ಲಿರುವ ಕೇರಳ ಗಡಿ ಸಮೀಪದ 24 ಮದ್ಯದಂಗಡಿ ಮತ್ತು 5 ಶೇಂದಿ ಅಂಗಡಿಗಳನ್ನು ಇಂದಿನಿಂದ ಆಗಸ್ಟ್ 15ರವರೆಗೆ ಮುಚ್ಚಲು ಆದೇಶಿಸಿದ್ದಾರೆ. ಇದು ಸಹಜವಾಗಿಯೇ ಮದ್ಯ ಪ್ರಿಯರಿಗೆ ತುಸು ಬೇಸರ ಮೂಡಿಸಿದೆ.
ಪುತ್ತೂರು ತಾಲೂಕಿನಲ್ಲಿ 7 ಮದ್ಯದಂಗಡಿಗಳು ಬಂದ್: ಪುತ್ತೂರು ತಾಲೂಕಿನ ನೆಟ್ಟಣನಿಗೆ ಮುಡ್ನೂರು 4 ಹಾಗೂ ಬಡಗನ್ನೂರು ನ ಏರಡು ಪಾಣಾಜೆಯ ಒಂದು ಮದ್ಯದಂಗಡಿ ಸೇರಿ ಒಟ್ಟು 7 ಮದ್ಯದಂಗಡಿ ಹಾಗೂ ತಾಲೂಕಿನ ಈಶ್ವರಮಂಗಳ, ಕರ್ನೂರು, ಗಾಳಿಮುಖ, ಬಡ ಗನ್ನೂರು ಹಾಗೂ ಅರ್ಲಪದವ್ ನ ಒಟ್ಟು 5 ಶೇಂದಿ ಅಂಗಡಿಗಳು ಆಗಸ್ಟ್ 15 ರ ವರೆಗೆ ಬಂದ್ ಆಗಲಿವೆ.