ಪುತ್ತೂರು : ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ವತಿಯಿಂದ ಆ.8 ರಂದು ನಡೆಸಲುದ್ದೇಶಿಸಿದ್ದ ನೇಮಕಾತಿ ಪರೀಕ್ಷೆಯನ್ನು ಕೋವಿಡ್ ಪ್ರಕರಣಗಳ ಮತ್ತುರಾಜ್ಯ ಸರಕಾರವು ಹೇರಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಸಕಲ ಸಿದ್ಧತೆಗಳನ್ನು ನಡೆಸಲಾಗಿತ್ತು. ಅನ್ಯ ರಾಜ್ಯಗಳಿಂದ ಪರೀಕ್ಷಾರ್ಥಿಗಳು ಪರೀಕ್ಷೆಗೆ ಹಾಜರಾಗಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಮುಂದಿನ ಪರಿಸ್ಥಿತಿಗಳನ್ನು ಮತ್ತು ಸರಕಾರದ ನಿರ್ಣಯಗಳನ್ನು ಗಮನದಲ್ಲಿರಿಸಿಕೊಂಡು ಪರೀಕ್ಷೆಗಳನ್ನು ನಡೆಸಲು ಪರಿಷ್ಕೃತ ದಿನಾಂಕಗಳನ್ನು ನಿರ್ಧರಿಸಲಾಗುವುದು. ಹೆಚ್ಚಿನ ಮಾಹಿತಿಗಳಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಜಾಲತಾಣ (www.campco.org)ವನ್ನು ಸಂದರ್ಶಿಸಬಹುದು ಎಂದು ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.