ಒಲಿಂಪಿಕ್ಸ್ ನಲ್ಲಿ ಜರ್ಮನಿ ವಿರುದ್ಧ 5-4 ಗೋಲುಗಳ ಅಂತರದಲ್ಲಿ ಭಾರತದ ಪುರುಷರ ಹಾಕಿ ತಂಡ ಗೆದ್ದು ಬೀಗಿದೆ. ಈ ಮೂಲಕ ಭಾರತ ತಂಡ ಕಂಚಿನ ಪದಕ ಪಡೆದುಕೊಂಡಿದೆ. ಬರೋಬ್ಬರಿ 41 ವರ್ಷಗಳ ಬಳಿಕ ಪುರುಷರ ಹಾಕಿ ತಂಡ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಸಾಧನೆಯನ್ನು ಮಾಡಿದೆ.

ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಪುರುಷರ ಹಾಕಿ ತಂಡ ಇದುವರೆಗೂ ಮೂರು ಕಂಚು, ಒಂದು ಬೆಳ್ಳಿ, 8 ಚಿನ್ನದ ಪದಕಗಳನ್ನು ಗೆದ್ದು ತಂದಿದೆ. ಇನ್ನೂ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇದುವರೆಗೂ 4 ಪದಕಗಳು ಲಭ್ಯವಾಗಿದೆ. ಪದಕ ಗೆದ್ದ ಟೀಂ ಇಂಡಿಯಾ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
A HISTORIC COMEBACK! 🥉🙌#IND men’s #hockey team came back 3-3 in the first-half against #GER and took the lead in the final 30 minutes to win the match 5-4 and the #bronze medal 🙌#Tokyo2020 | #UnitedByEmotion | #StrongerTogether pic.twitter.com/acZHNxR5Py
— #Tokyo2020 for India (@Tokyo2020hi) August 5, 2021