ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಅಖಿಲ ಭಾರತೀಯ ಹಿಂದೂ ಮಹಾಸಭಾ ಪಕ್ಷದ ರಾಜ್ಯಾಧ್ಯಕ್ಷ ರಾದ ರಾಜೇಶ್ ಪವಿತ್ರನ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಭೇಟಿ ನೀಡಿದರು. ಪಕ್ಷ ಸಂಘಟನೆಯ ಬಗ್ಗೆ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಧನ್ಯ ಕುಮಾರ್ ಬೆಳಂದೂರು, ನವೀನ್ ಕುಲಾಲ್ , ಪ್ರೀತಂ,ರಾಜೇಶ್ ಕೌಡಿಚ್ಚಾರ್, ಪ್ರಜನ್ ರೈ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಅಖಿಲ ಭಾರತೀಯ ಹಿಂದೂ ಮಹಾಸಭಾ:
ಅಖಿಲ ಭಾರತೀಯ ಹಿಂದೂ ಮಹಾಸಭಾ ಭಾರತದಲ್ಲಿನ ಒಂದು ಬಲಪಂಥೀಯ ಹಿಂದೂ ರಾಷ್ಟ್ರೀಯವಾದಿ ರಾಜಕೀಯ ಪಕ್ಷ. ಅದನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಸಮರ್ಥಿಸಲ್ಪಟ್ಟ ಜಾತ್ಯತೀತತೆಗೆ ಪರ್ಯಾಯವಾಗಿ, ಆದರೆ ಅಖಿಲ ಭಾರತ ಮುಸ್ಲಿಮ್ ಲೀಗ್ ಮತ್ತು ಇತರ ಇಸ್ಲಾಮಿ ಸಂಘಗಳು ಪ್ರಚಾರಮಾಡಿದ ಮುಸ್ಲಿಮ್ ಪ್ರತ್ಯೇಕತಾವಾದವನ್ನು ವಿರೋಧಿಸಲು ಪ್ರಯತ್ನಿಸುವ ಮತ್ತು ಅದಕ್ಕೆ ಆಕರ್ಷಿತವಾಗದ ಭಾರತದ ಧಾರ್ಮಿಕ ಬಹುಮತವಾದ ಹಿಂದೂಗಳಿಗಾಗಿ ಸ್ಥಾಪಿಸಲಾಯಿತು.
