ಪುತ್ತೂರು: ಆರ್ಯಾಪು ಗ್ರಾಮದ ಮಚ್ಚಿಮಲೆ ಎಂಬಲ್ಲಿ ಸರಕಾರಿ ಗುಡ್ಡ ಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟು, ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಎಸ್‌ಐ ಉದಯರವಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ೯ ಮಂದಿಯನ್ನು ಬಂಧಿಸಿ, ೯ ಕೋಳಿ, ಎರಡು ಬೈಕ್ ಹಾಗೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಯರಾಮ, ಕೆ.ಧರ್ಮಪಾಲ, ಪ್ರೇಮ್‌ಕುಮಾರ್, ಸತೀಶ, ಅಶೋಕ, ಗಿರೀಶ ಎಂ, ಮಾಯಿಲಪ್ಪ, ಗಿರೀಶ್ ಪಿ, ಮೋಹನದಾಸ್ ಬಂಧಿತ ಆರೋಪಿಗಳು. ಹಣವನ್ನು ಪಣವಾಗಿಟ್ಟು ಗುಡ್ಡದಲ್ಲಿ ಅಕ್ರಮವಾಗಿ ಕೋಳಿ ಅಂಕ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದ ಪೊಲೀಸರು ಗುಡ್ಡದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಕೋಳಿ ಅಂಕದಲ್ಲಿ ತೊಡಗಿರುವುದು ಕಂಡು ಬಂದಿದೆ.
ಕೋಳಿ ಅಂಕದಲ್ಲಿ ತೊಡಗಿದ್ದವರ ಪೈಕಿ ಜಯರಾಮ, ಕೆ.ಧರ್ಮಪಾಲ, ಪ್ರೇಮ್‌ಕುಮಾರ್, ಸತೀಶ, ಅಶೋಕ, ಗಿರೀಶ ಎಂ, ಮಾಯಿಲಪ್ಪ, ಗಿರೀಶ್ ಪಿ, ಮೋಹನದಾಸ್ ರವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಮೇಶ ಪೂಜಾರಿ ಮೇಗಿನಪಂಜ, ತನಿಯಪ್ಪ ಅಜಿಲ ಮಚ್ಚಿಮಲೆ, ವಾಸು ಅಜಿಲ ಮಚ್ಚಿಮಲೆ, ಸಂತೋಷ್ ನಾಯ್ಕ ಬಂಗಾರಡ್ಕ ಮತ್ತು ಇತರ ಕೆಲವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.