ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ್ನು ತಾಲಿಬಾನಿಗಳು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗೆ ವಶಪಡಿಸಿಕೊಳ್ಳುತ್ತಲೇ ತಾಲಿಬಾನಿಗಳು ಮೊದಲು ಮಾಡಿದ ಕೆಲಸ ಅಲ್ಲಿನ ಜೈಲಿನಲ್ಲಿದ್ದ ಕ್ರಿಮಿನಲ್ಗಳು, ಉಗ್ರರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದು.
ಹೀಗೆ ಜೈಲಿನಿಂದ ಬಿಡುಗಡೆಗೊಂಡವರಲ್ಲಿ ಅಲ್ಖೈದಾ ಉಗ್ರರು ಸಹ ಇದ್ದಾರೆ. ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ ಸಂಘಟನೆಯ ಮಾಜಿ ಡೆಪ್ಯುಟಿ ಮೌಲ್ವಿ ಫಖರ್ ಮೊಹಮ್ಮದ್ನನ್ನೂ ಸಹ ಬಿಡುಗಡೆ ಮಾಡಲಾಗಿದೆ.
ಇನ್ನು ಜೈಲಿನಿಂದ ಬಿಡುಗಡೆಗೊಳ್ಳುತ್ತಿದ್ದಂತೆಯೇ ಅಲ್ಖೈದಾ ಉಗ್ರರು ತಮ್ಮ ವಸ್ತುಗಳನ್ನ ಹೊತ್ತುಕೊಂಡು ಕಾಬೂಲ್ನ್ನು ತೊರೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನು ಇಂದು ಅಥವಾ ನಾಳೆ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸುವ ಸಾಧ್ಯತೆಗಳಿವೆ.
Prisoners leaving Kabul jail after being broken out by Taliban. pic.twitter.com/B84F2UrtEA
— Richard Engel (@RichardEngel) August 15, 2021