ಪುತ್ತೂರು: ಗ್ರಾ.ಪಂ ಚುನಾವಣೆಗೆ ಸಂಬಂಧಿ ಮತಗಟ್ಟೆಗಳನ್ನು ಭೇಟಿ ಮಾಡಿ ಪರಿಶೀಲನೆ ಮಾಡಲೆಂದು ಚುನಾವಣಾಧಿಕಾರಿ ಡಾ.ಯತೀಶ್ ಉಳ್ಳಾಲ್ ಅವರು ಮತಗಟ್ಟೆಯಲ್ಲಿ ಮತದಾರನ ಕೈಯಲ್ಲಿರುವ ಚೀಟಿಯನ್ನು ನೋಡಿ ಆತನಲ್ಲಿ ವಿಚಾರಿಸಿದಾಗ ಆತ ಚೀಟಿ ಕೊಟ್ಟ ಸ್ಥಳವನ್ನು ತೋರಿಸಿದರು.
![](https://zoomintv.online/wp-content/uploads/2020/12/IMG-20201227-WA0021-1024x576.jpg)
ತಕ್ಷಣ ಅಲ್ಲಿಗೆ ಧಾವಿಸಿದ ಡಾ|ಯತೀಶ್ ಉಳ್ಳಾಲ್ ಅವರು ಬೂತ್ ನಲ್ಲಿ ಟೇಬಲ್ ಹಾಕಿ ಕೂತಿದ್ದವರನ್ನು ವಿಚಾರಿಸಿದಲ್ಲದೆ ಟೇಬಲ್ ಕೆಳಗೆ ಇದ್ದ ಅಭ್ಯರ್ಥಿಗಳ ಚಿಹ್ನೆ ಇದ್ದ ಚೀಟಿನ ಒಂದು ಕಟ್ಟನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸುವಂತೆ ಮತಗಟ್ಟೆಯ ಪರಿಶೀಲನಾಧಿಕಾರಿಗೆ ಸೂಚನೆ ನೀಡಿದ್ದಾರೆ. ಇದೆ ವೇಳೆ ಅಭ್ಯರ್ಥಿಯೋರ್ವ ಮತದಾರರಿಗೆ ಚೀಟಿ ಕೊಡುತ್ತಿರುವುದನ್ನು ಸಹ ಸಹಾಯಕ ಕಮೀಷನರ್ ಪತ್ತೆ ಮಾಡಿದ್ದಾರೆ.