ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯದ ಅಳಕೆಮಜಲು ಒಕ್ಕೂಟದ ಚಿಗುರು ಜ್ಞಾನ ವಿಕಾಸ ಕೇಂದ್ರದ ವಿಚಾರ ಗೋಷ್ಠಿ ಕಾರ್ಯಕ್ರಮವೂ ಅಳಕೆಮಜಲು ಶಾರದಾಂಭ ಭಜನಾ ಮಂದಿರದಲ್ಲಿ ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದ.ಕ.ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ನೆರವೇರಿಸಿದರು. ಇಂತಹ ಕಾರ್ಯಕ್ರಮದ ಮೂಲಕ ಮಹಿಳೆಯರು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಿದೆ. ಕುಟುಂಬದ ಪರಿವರ್ತನೆಗೆ ಇದು ಮೂಲ ಮಂತ್ರ ಆಗಬೇಕು. ನಾವು ಯೋಜನೆಯನ್ನು ಗಟ್ಟಿ ಮಾಡಿಕೊಂಡರೆ ನಮಗೆ ಯೋಜನೆ ಶಕ್ತಿಯಾಗಿ ನಿಲ್ಲುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹರಿಣಿ ಪುತ್ತೂರಾಯ ಮಾತನಾಡಿ, ಮಹಿಳೆಯರು ಸಬಲೀಕರಣದೊಂದಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಪ್ರಬಲವಾಗಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ವಿಟ್ಲ ಯೋಜನಾಧಿಕಾರಿ ಚೆನ್ನಪ್ಪ ಗೌಡ, ಅಳಕೆಮಜಲು ಒಕ್ಕೂಟದ ಅಧ್ಯಕ್ಷ ತಿರುಮಲೇಶ್ವರ ಉಪಸ್ಥಿತರಿದ್ದರು.
ಮಾಣಿ ವಲಯ ಮೇಲ್ವಿಚಾರಕಿ ಶ್ರೀಮತಿ ಪ್ರೇಮಾ ಸ್ವಾಗತಿಸಿ, ಸೇವಾಪ್ರತಿನಿಧಿ ಸುಗಂಧಿನಿ ವಂದಿಸಿದರು. ವಿಟ್ಲ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ ನಿರೂಪಿಸಿದರು. ಕೇಂದ್ರದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.