ತುಂಬ ಬಡ ಕುಟುಂಬದ ಮನೆಗೆ ಆಧಾರಸ್ತಂಭವಾಗಿದ್ದ 29 ವರುಷದ ಯುವಕ ಕಾಮಲೆ ರೋಗ ಪೀಡಿತನಾಗಿ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದ, ಈಗ ಆತನ ಎರಡೂ ಕಿಡ್ನಿ ಡ್ಯಾಮೇಜ್ ಆಗಿದೆ ಲಿವರ್ ಕೂಡ ಡ್ಯಾಮೇಜ್ ಆಗಿದೆ, ಹಾರ್ಟ್ ಬೀಟ್ ಕೂಡ ಲೋ ಆಗುತ್ತಿದೆ ಎಂದು ವೈದ್ಯರು ತಿಳಿಸಿದ್ದು… ಕೈಯ್ಯಲ್ಲಿ ಚಿಕ್ಕಾಸು ಇಲ್ಲದ ಆತನ ಮನೆ ಮಂದಿ ಕಂಗಾಲಾಗಿ ಸಹೃದಯಿ ದಾನಿಗಳ ನೆರವು ಯಾಚಿಸುತ್ತಿದ್ದಾರೆ.

ಕಿಡ್ನಿ ರಿಕವರ್ ಆಗುವ ತನಕ ವೆಂಟಿಲೇಟರ್ ನಲ್ಲಿ ಆತನನ್ನು ಇರಿಸುವುದು ಅನಿವಾರ್ಯ ಎಂದು ವೈದ್ಯರು ತಿಳಿಸಿದ್ದು ಈಗಾಗಲೇ 2 ಲಕ್ಷ ರೂಪಾಯಿ ಖರ್ಚು ಆಗಿದೆ. ಅವರಿವರಲ್ಲಿ ಬೇಡಿ ತಂದು ಆ ವೆಚ್ಚ ಭರಿಸಿದ್ದಾರೆ. ದಿನವೊಂದಕ್ಕೆ 40,000 ಸಾವಿರ ರೂಪಾಯಿಯ ಔಷಧಿಯ ವೆಚ್ಚ ತಗಲುತ್ತಿದ್ದು, ಇನ್ನೂ ಒಂದು ತಿಂಗಳು ವೆಂಟಿಲೇಟರ್ ನಲ್ಲಿ ಇಟ್ಟು ಔಷಧೋಪಚಾರ ಮಾಡುವ ಅಗತ್ಯ ಇರುವುದರಿಂದ ರೋಗಿಯ ಮನೆ ಮಂದಿ ದಿಕ್ಕು ತೋಚದೆ ಸಹೃದಯಿ ದಾನಿಗಳ ಬಳಿ ಮನೆಯ ಆಧಾರಸ್ತಂಭವನ್ನು ಉಳಿಸಿಕೊಡಿ ಎಂದು ಸಹಾಯ ಯಾಚಿಸುತ್ತಿದ್ದಾರೆ.
ಸಹಾಯ ಮಾಡಲಿಚ್ಛಿಸುವ ಈ ಕೆಳಗಿನ ಬ್ಯಾಂಕ್ ಖಾತೆ ಅಥವಾ ಗೂಗಲ್ ಪೇ ನಂಬರ್ ಗೆ ಧನ ಸಹಾಯ ಮಾಡಬಹುದಾಗಿದೆ.
ರೋಗಿಯ ಹೆಸರು : ಪ್ರಶಾಂತ್ (29)
ಅಕೌಂಟ್ ಬಳಕೆದಾರರ ಹೆಸರು : ಪ್ರಮಿತಾ ( Pramitha)
Ac no : 9432500100437701
Ifsc: KARB0000943
Branch : Belma, Deralakatte.
Google Pay no:8861126524
ಸಂಪರ್ಕ ಸಂಖ್ಯೆ : +91 95359 54550