ಪುತ್ತೂರು: ನಾಯಿ ಕಚ್ಚಿ ಕುದ್ದುಪದವು ಮೂಲದ 12 ವರ್ಷದ ಬಾಲಕ ಗಂಭೀರಗೊಂಡ ಪ್ರಕರಣ ಆ.28 ರಂದು ಬಡಗನ್ನೂರು ಗ್ರಾ. ಪಂ ವ್ಯಾಪ್ತಿಯ ಸುಳ್ಯಪದವು ಎಂಬಲ್ಲಿ ನಡೆದಿದೆ.
ಗಾಯಗೊಂಡ ಬಾಲಕನನ್ನು ಕುದ್ದುಪದವಿನ ರಿಕ್ಷಾ ಚಾಲಕ ಹರಿಶ್ಚಂದ್ರ ರವರ ಮಗ ಸಂಪ್ರೀತ್ (12) ಎಂದು ಗುರುತಿಸಲಾಗಿದೆ.
ಬಡಗನ್ನೂರು ನೆಂಟರ ಮನೆಗೆ ಹೋಗಿದ್ದ ವೇಳೆ ಬಾಲಕನಿಗೆ ನಾಯಿ ಕಚ್ಚಿದು, ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.