ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಕಾರದೊಂದಿಗೆ, ಲೆನ್ಸ್ ಕ್ಯಾಪ್ ವತಿಯಿಂದ ನಡೆಸುವ ಅಭಿನಯ ತರಗತಿಯ ಉದ್ಘಾಟನಾ ಕಾರ್ಯಕ್ರಮವೂ ಸೆ.6 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಮತ್ತು ಕಿರು ಚಿತ್ರ ‘ಅದ್ವೈತಂ’ ಪೋಸ್ಟರ್ ಬಿಡುಗಡೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್ ರವರು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ದಯಾನಂದ್ ಕತ್ತಲ್ ಸಾರ್ ಮತ್ತು ವಿಜಯನಾಥ ಕೋಡಿಯಾಲ್ ಬೈಲ್ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಮತ್ತು ಹ್ಯೂಮನ್ ರೈಟ್ಸ್ ನ ಡೈರೆಕ್ಟರ್ ಇಂದಿರಾ ನಾಗೇಶ್, ರಂಗಭೂಮಿ ಕಲಾವಿದೆ ಮ.ನ.ಪಾ. ಮಾಜಿ ಮೇಯರ್ ಅಮಿತ ಕಲಾ, ಉದ್ಯಮಿ ರತೀಂದ್ರನಾಥ್, ಮೋಹನ್ ಕೊಪ್ಪಳ ಕದ್ರಿ, ಕಾಂಗ್ರೆಸ್ ನ ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ,ಗ್ರೇಟ್ ವೇ ಇಂಡಿಯಾ ಮಂಗಳೂರು ನಿರ್ದೇಶಕ ಹರ್ಷಕುಮಾರ್ ರೈ ಮಾಡಾವು, ಸಂಸ್ಥೆಯ ಸ್ಥಾಪಕ ಗೌತಮ್ ಮೋಹನ್, ಮೇಘನಾ ಅತ್ತಾವರ, ಹರ್ಷ, , ಕೇದಾರ್ ಕುಡುವ, ಸಂಜಯ್ ನಾರಾಯಣ್,ಹರ್ಷಿತ್ ಬಿಸಿರೋಡ್, ಸಚಿನ್ ನಾಯಕ್ ಬೋಳಾರ್,ಇಂದುಶ್ರೀ ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.