ಪುತ್ತೂರು : ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾರಂದಕುಕ್ಕು ಅಂಗನವಾಡಿಯಲ್ಲಿ ‘ಪ್ರೊಟೀನ್ ಅಭಿಯಾನ’ ಕಾರ್ಯಕ್ರಮ ನಡೆಯಿತು.

ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸಿಂಧು ಪ್ರಭುರವರು ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಕೋಡಿಂಬಾಡಿ ವಲಯ ಮೇಲ್ವಿಚಾರಿಕಿ ಹರಿಣಾಕ್ಷಿ ಮಾಹಿತಿ ನೀಡಿದರು.

ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಬದಿನಾರು, ಅಂಗನವಾಡಿಯ ಮಕ್ಕಳ ಪೋಷಕರು ಮತ್ತು ಸ್ತ್ರೀಶಕ್ತಿಯ ಸದಸ್ಯರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ವೇದಾವತಿ ಶೆಟ್ಟಿ ಸ್ವಾಗತಿಸಿ,ಸಹಾಯಕಿ ವೀಣಾರವರು ವಂದಿಸಿದರು.
