ವಿಟ್ಲ: ತಾಲೂಕು ರಚನೆಗೆ ಸಂಬಂಧಿಸಿದಂತೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ರವರನ್ನು ವಿಟ್ಲ ಕ್ಷೇತ್ರದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ರವರ ನೇತೃತ್ವದ ನಿಯೋಗ ಅ.2 ರಂದು ಭೇಟಿಯಾಗಿ ಚರ್ಚೆ ನಡೆಸಿದರು ಹಾಗೂ ಪ್ರಸ್ತಾವಿತ ತಾಲೂಕಿನ ಸಂಪೂರ್ಣ ವಿವರಗಳು ಇರುವ ಪತ್ರವನ್ನು ಶಾಸಕರಿಗೆ ನೀಡಿದರು.

ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ರಚನಾ ಸಮಿತಿಯ ಪ್ರಮುಖರಾದ ರಾಜೀವ್ ಭಂಡಾರಿ, ಶ್ರೀಕೃಷ್ಣ ವಿಟ್ಲ, ಪುನೀತ್ ಮಾಡತ್ತಾರ್, ವಿಶ್ವನಾಥ ವೀರಕಂಭ, ಉದಯ ಕುಮಾರ್ ಆಲಂಗಾರ್, ಪದ್ಮನಾಭ ಕಟ್ಟೆ, ಹರಿಪ್ರಸಾದ್ ಯಾದವ್, ಶರತ್ ಎನ್ಎಸ್ ಉಪಸ್ಥಿತರಿದ್ದರು. ಈ ಬಗ್ಗೆ ಪೂರಕವಾಗಿ ಸ್ಪಂದಿಸಿದ ಶಾಸಕರು ತಾಲೂಕಿನ ರಚನೆಗೆ ಬೆಂಬಲಿಸುವುದಾಗಿ ತಿಳಿಸಿದರು ಎಂದು ತಿಳಿದು ಬಂದಿದೆ.

