ಪುತ್ತೂರು: ತುಳುನಾಡ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕಳೆದ 3 ವರ್ಷಗಳಿಂದ ಪುತ್ತೂರಿನಲ್ಲಿ ಹುಲಿವೇಷ ನಡೆಸಿಕೊಂಡು ಬರುತ್ತಿರುವ “ಕಲ್ಲೇಗ ಟೈಗರ್ಸ್” ಇದರ 4ನೇ ವರ್ಷದ “ಪಿಲಿಗೊಬ್ಬು2021” ರ ಆಮಂತ್ರಣ ಪತ್ರವು ಅ.04 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಂಡಿತು.
ದೇವಸ್ಥಾನದ ಅರ್ಚಕ ವಸಂತ ಕೆದಿಲಾಯ ಇವರು ಪ್ರಾರ್ಥನೆ ಸಲ್ಲಿಸುವ ಮೂಲಕ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಇದೇ ಬರುವ ಅ.12 ರಂದು ಪುತ್ತೂರಿನ ಕಲ್ಲೇಗ ದೈವಸ್ಥಾನದ ಬಳಿ 4ನೇ ವರ್ಷದ ಪಿಲಿಗೊಬ್ಬು ಕಾರ್ಯಕ್ರಮವು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಆಮಂತ್ರಣ ಪತ್ರಿಕೆ ಬಿಡುಗಡೆ ವೇಳೆ ಕಲ್ಲೇಗ ಟೈಗರ್ಸ್ ಇದರ ಸರ್ವ ಸದಸ್ಯರು ಉಪಸ್ಥಿತರಿದ್ದರು.