ಬಂಟ್ವಾಳ: ತಾಲೂಕು ಕನ್ಯಾನ ಗ್ರಾಮದ ಬನಾರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಕನ್ಯಾನ ಇಲ್ಲಿನ ಆಡಳಿತ ಮಂಡಳಿ ದೇವಸ್ಥಾನದ ಅಧ್ಯಕ್ಷರಾದ ಲಿಂಗಪ್ಪ ಗೌಡ ಪನೆಯಡ್ಕ, ಸುಬ್ಬಣ್ಣ ಭಟ್ ಕಮ್ಮಜೆ ಹಾಗೂ ಬಿ. ಸ್. ಬನಾರಿ, ಕೃಷ್ಣ ಬನಾರಿ ರವರಿಗೆ ವಿಶೇಷ ಮನವಿ ನೀಡಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಹಿಂದೂ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ದೇವಸ್ಥಾನ ಪ್ರವೇಶ ಮಾಡಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಣ್ಣು ನಾಯ್ಕ್ ಕೊಣಲೆ ಹಿರಿಯ ಸ್ವಯಂ ಸೇವಕರು, ಚಂದ್ರಹಾಸ ಕನ್ಯಾನ ಬಜರಂಗದಳ ಸಹ ಸಂಚಾಲಕ ವಿಟ್ಲ ಪ್ರಖಂಡ, ಮನೋಜ್ ಬನಾರಿ ವಿಶ್ವ ಹಿಂದೂ ಪರಿಷದ್ ಕನ್ಯಾನ ವಲಯ ಪ್ರಧಾನ ಕಾರ್ಯದರ್ಶಿ, ಕೃಷ್ಣಪ್ಪ ಗೌಡ ಪನೆಯಡ್ಕ ಬಜರಂಗದಳ ಕನ್ಯಾನ ವಲಯ ಸಂಚಾಲಕರು, ವಲಯದ ಪ್ರಮುಖರಾದ ಹರೀಶ್ ಗೋಳಿಕಟ್ಟೆ ಯೋಗೀಶ್ ಬನಾರಿ, ರವೀಂದ್ರ ಕನ್ಯಾನ, ಮುರಳಿ ಜೋಗಿ, ಈಶ್ವರ ಅಕ್ಕೆರೆಕೋಡಿ, ವಿನೀತ್ ಉಪಸ್ಥಿತರಿದ್ದರು.