ವಿಟ್ಲ: ಅತ್ಯುತ್ತಮ ಗುಣಮಟ್ಟ 916 ಬಿಐಎಸ್ ಹಾಲ್ ಮಾರ್ಕ್ ಚಿನ್ನಾಭರಣ, 100% ಪ್ರಾಮಾಣೀಕೃತ ವಜ್ರಭರಣ, ನವ ನವೀನ ಬೆಳ್ಳಿಯ ಆಭರಣಗಳ ವಿಶಾಲ ಸಂಗ್ರಹದೊಂದಿಗೆ ಪಾರದರ್ಶಕ ಸೇವೆಯೊಂದಿಗೆ ವಿಟ್ಲದಲ್ಲಿ ಐದು ವರ್ಷ ಪೂರೈಸಿದ “ಚಾಯ್ಸ್ ಗೋಲ್ಡ್” ಚಿನ್ನಾಭರಣ ಮಳಿಗೆಯು ಅ.11 ರಂದು ನವೀಕೃತ ವಿಶಾಲ ಮಳಿಗೆಯಲ್ಲಿ ಶುಭಾರಂಭಗೊಳ್ಳಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಅಸ್ಸಯ್ಯಿದ್ ಹುಸೈನ್ ಬಾಅಲಿವಿ ತಂಗಳ್ ಕುಕ್ಕಾಜೆ, ಅಸ್ಸಯ್ಯಿದ್ ಶಿಹಾಬುದ್ದೀನ್ ತಂಗಳ್ ಮದಕ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಟ್ಲ ಅನಂತೇಶ್ವರಿ ದೇವಾಲಯದ ಅರ್ಚಕರಾದ ಸಾಯಿ ಪ್ರಸಾದ್ ಭಟ್, ವಿಟ್ಲ ಶೋಕಮಾತೆ ಇಗರ್ಜಿಯ ಧರ್ಮ ಗುರುಗಳಾದ ರೆವ. ಫಾದರ್ ಐವನ್ ಮೈಕಲ್ ರೋಡಿಗ್ರಸ್, ಅಬ್ಬಾಸ್ ಮದನಿ, ಮಹಮ್ಮದ್ ಅಲಿ ಪೈಝಿ ಇರ್ಫಾನಿ, ವಿಟ್ಲ ಠಾಣಾ ನಿರೀಕ್ಷಕರಾದ ನಾಗರಾಜ್ ಹೆಚ್.ಇ., ವಿಟ್ಲ ಪಟ್ಟಣ ಪಂಚಾಯತ್ ನ ಮುಖ್ಯಧಿಕಾರಿ ಮಾಲಿನಿ, ಜಿಲ್ಲಾ ಪಂಚಾಯತ್ ಸದಸ್ಯ ಎಂ. ಎಸ್. ಮುಹಮ್ಮದ್, ವಿಟ್ಲ ಪಟ್ಟಣ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಅರುಣ್ ವಿಟ್ಲ, ವಿಟ್ಲ ಅರಮನೆಯ ಕೃಷ್ಣಯ್ಯ ವಿಟ್ಲ, ಶಾಕಿರ್ ಅಳಿಕೆಮಜಲ್, ರಶೀದ್ ವಿಟ್ಲ, ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಇಕ್ಬಾಲ್, ಹೋನೆಸ್ಟ್, ಅಬ್ದುಲ್ ರವೂಫ್, ಅಬ್ದುಲ್ ಖಾದರ್ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.