ಮಂಗಳೂರು: ನಗರದ ಅತ್ತಾವರದ ಬಿಗ್ ಬಜಾರ್ ಬಳಿ ಸಿಕ್ಕ ಪರ್ಸ್ ಒಂದನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಮಹಮದ್ ಹನೀಫ್ ರವರಿಗೆ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆಟೋ ಚಾಲಕ ಹನೀಫ್ ಅಭಿನಂದಿಸಿದರು.
ಕಳೆದ ಹದಿನೈದು ವರ್ಷಗಳಿಂದ ಹನೀಫ್ ರವರು ಆಟೋ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮಗೆ ಸಿಕ್ಕಿದ ಪರ್ಸ್ ಅನ್ನು ಆಯುಕ್ತರ ಕಚೇರಿಗೆ ತಂದು ಕೊಡುವ ಮೂಲಕ ಹನೀಫ್ ಮಾನವೀಯತೆ ಮೆರೆದಿದ್ದು, ಜನರು ಆಟೋ ಚಾಲಕರ ಕುರಿತಾಗಿ ಆರೋಪ ಮಾಡುವ ವೇಳೆ ಇವರು ಮಾಡಿದ ಕೆಲಸ ಎಲ್ಲರೂ ಮೆಚ್ಚುವಂತಹದ್ದು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅಭಿನಂದಿಸಿದ್ದಾರೆ.





























